ಬೆಂಗಳೂರು: ಸಂದೀಪ್ ಕುಮಾರ್ ಸೈಕಿಯಾ ಅವರು ಕೊನೆಯ ಕ್ಷಣದಲ್ಲಿ ಗಳಿಸಿದ ಉಡುಗೊರೆ ಗೋಲಿನ ನೆರವಿನಿಂದ ಕೆ.ಆರ್.ಪುರ ತಂಡವು ಸಿ.ಎಂ ಕಪ್ ಫುಟ್ಬಾಲ್ ಟೂರ್ನಿಯ ಪಂದ್ಯದಲ್ಲಿ ಮಂಗಳವಾರ 1–0ಯಿಂದ ಬ್ಯಾಟರಾಯನಪುರ ತಂಡದ ವಿರುದ್ಧ ರೋಚಕ ಜಯ ಸಾಧಿಸಿತು.

ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆದ ಸಿ ಗುಂಪಿನ ಈ ಪಂದ್ಯವು ‘ಡ್ರಾ’ದತ್ತ ಸಾಗುತ್ತಿತ್ತು. ಬ್ಯಾಟರಾಯನಪುರ ತಂಡದ ಸಂದೀಪ್ 82ನೇ ನಿಮಿಷದಲ್ಲಿ ಎದುರಾಳಿ ತಂಡಕ್ಕೆ ಗೋಲಿನ ಉಡುಗೊರೆ ನೀಡಿದರು. ಕೆ.ಆರ್.ಪುರ ತಂಡವು ಟೂರ್ನಿಯಲ್ಲಿ ಎರಡನೇ ಗೆಲುವು ದಾಖಲಿಸಿತು.

ಶ್ರೀಕಲಾ ಎನ್. ಅವರು ಹೆಚ್ಚುವರಿ ಸಮಯದಲ್ಲಿ ಗಳಿಸಿದ ಗೋಲಿನ ಬಲದಿಂದ ಜಯನಗರ ತಂಡವು ಡಿ ಗುಂಪಿನ ಪಂದ್ಯದಲ್ಲಿ ಯಲಹಂಕ ಜೊತೆಗೆ 2–2 ಡ್ರಾ ಸಾಧಿಸಿತು.

ಪ್ರಜ್ವಲ್ 5ನೇ ನಿಮಿಷದಲ್ಲಿ ಗೋಲು ಗಳಿಸಿ, ಯಲಹಂಕ ತಂಡಕ್ಕೆ ಆರಂಭಿಕ ಮುನ್ನಡೆ ತಂದುಕೊಟ್ಟರು. ಜಯನಗರ ತಂಡದ ಧವನ್ (33ನೇ ನಿ.) ಗೋಲು ಗಳಿಸಿ, ಸಮಬಲ ಸಾಧಿಸಿದರು. ಮನೋಜ್ ಕುಮಾರ್ (72ನೇ ನಿ.) ಯಲಹಂಕ ತಂಡಕ್ಕೆ 2–1 ಮುನ್ನಡೆ ತಂದುಕೊಟ್ಟರೂ, ಶ್ರೀಕಲಾ (90+4ನೇ ನಿ.) ಅಮೋಘ ಗೋಲು ಗಳಿಸಿ, ತಂಡವು ಡ್ರಾ ಸಾಧಿಸಲು ಕಾರಣರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.