ಬೆಂಗಳೂರು: ಕವಿ ಅರಸನ್ ಅವರ ಅವಳಿ ಗೋಲುಗಳ ನೆರವಿನಿಂದ ರಾಜಾಜಿನಗರ ತಂಡವು ಸಿ.ಎಂ ಕಪ್ ಫುಟ್ಬಾಲ್ ಟೂರ್ನಿಯ ಸೆಮಿಫೈನಲ್ನಲ್ಲಿ ಸೋಮವಾರ 3–2ರಿಂದ ರಾಜರಾಜೇಶ್ವರಿನಗರ ತಂಡದ ವಿರುದ್ಧ ರೋಚಕ ಜಯ ಸಾಧಿಸಿತು. ಶಾಂತಿನಗರ ತಂಡವು ಕೆ.ಆರ್.ಪುರ ತಂಡವನ್ನು ಮಣಿಸಿ, ಫೈನಲ್ಗೆ ಲಗ್ಗೆ ಇಟ್ಟಿತು.

ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ರಾಜಾಜಿನಗರ ತಂಡದ ಕವಿ ಅರಸನ್ (34ನೇ ಹಾಗೂ 77ನೇ ನಿ.) ಎರಡು ಗೋಲು ಹಾಗೂ ಸೂರ್ಯಪ್ರಕಾಶ್ ಬಿ. (83ನೇ ನಿ.) ಒಂದು ಗೋಲು ಹೊಡೆದು ಗೆಲುವಿನ ರೂವಾರಿಯಾದರು. ರಾಜರಾಜೇಶ್ವರಿನಗರ ತಂಡದ ಪವನ್ ಬಿ. (79ನೇ ನಿ.) ಹಾಗೂ ಮೈಕೆಲ್ ಆರ್. (90+4ನೇ ನಿ.) ಅವರು ಕೊನೆಯಲ್ಲಿ ಹೋರಾಟ ತೋರಿದರೂ, ಗೆಲುವು ದಕ್ಕಲಿಲ್ಲ.

ಇನ್ನೊಂದು ಸೆಮಿಫೈನಲ್ನಲ್ಲಿ ಮಗೇಶ್ ಎಸ್. (53ನೇ ನಿ.) ದಾಖಲಿಸಿದ ಏಕೈಕ ಗೋಲಿನ ಬಲದಿಂದ ಶಾಂತಿನಗರ ತಂಡವು 1–0ಯಿಂದ ಕೆ.ಆರ್.ಪುರ ತಂಡವನ್ನು ಸೋಲಿಸಿತು. ಅದರೊಂದಿಗೆ, ಬುಧವಾರ ನಡೆಯಲಿರುವ ಫೈನಲ್ನಲ್ಲಿ ರಾಜಾಜಿನಗರ ತಂಡದೊಂದಿಗೆ ಸೆಣಸಲು ವೇದಿಕೆ ಸಿದ್ಧಪಡಿಸಿಕೊಂಡಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-4-680302156

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.