ಗೊಂದಲದಲ್ಲಿ ಭಾರತ ಫುಟ್‌ಬಾಲ್ ತಂಡ

7

ಗೊಂದಲದಲ್ಲಿ ಭಾರತ ಫುಟ್‌ಬಾಲ್ ತಂಡ

Published:
Updated:

ನವದೆಹಲಿ: ಇದೇ ಆಗಸ್ಟ್‌ನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್‌ನಲ್ಲಿ ಸ್ಪರ್ಧಿಸುವ ಕನಸು ಕಾಣುತ್ತಿರುವ ಭಾರತ ಪುರುಷರ ಫುಟ್‌ಬಾಲ್ ತಂಡ ಈಗ ಗೊಂದಲದಲ್ಲಿದೆ. ಅದಕ್ಕೆ ಕಾರಣ ಭಾರತ ಒಲಿಂಪಿಕ್ಸ್‌ ಸಂಸ್ಥೆ (ಐಒಎ)ಯ ನಿಯಮಾವಳಿ. ತಂಡ ವಿಭಾಗದ ಸ್ಪರ್ಧೆಗಳಿಗೆ ದೇಶದ ಅಗ್ರ ಎಂಟು ಕ್ರೀಡಾ ವಿಭಾಗಗಳ ತಂಡಗಳನ್ನು ಕಳುಹಿಸುವ ನಿಯಮ ಇದೆ.  ಭಾರತ ತಂಡವು 16ನೇ ಸ್ಥಾನದಲ್ಲಿದೆ.

‘ವೈಯಕ್ತಿಕ ವಿಭಾಗಗಳ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ ಗುಂಪು ವಿಭಾಗಗಳಲ್ಲಿ  ಅಗ್ರ ಎಂಟು ಕ್ರೀಡಾ ತಂಡಗಳನ್ನು ಕಳುಹಿಸುವ ನಿಯಮಕ್ಕೆ ಸಂಸ್ಥೆ ಬದ್ಧವಾಗಿದೆ’ ಎಂದು ಐಒಎ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಅಖಿಲ ಭಾರತ ಫುಟ್‌ಬಾಲ್ ಸಂಸ್ಥೆ  ಪ್ರದಾನ ಕಾರ್ಯದರ್ಶಿ ಕುಶಾಲ್ ದಾಸ್, ‘ನಮ್ಮ ಅಧ್ಯಕ್ಷರಾದ ಪ್ರಫುಲ್ ಪಟೇಲ್ ಅವರು ಐಒಎ ಮುಖ್ಯಸ್ಥ ನರೀಂದರ್ ಬಾತ್ರಾ ಅವರೊಂದಿಗೆ ಈ ಕುರಿತು ಮಾತನಾಡಿದ್ದಾರೆ. ನಮಗೆ ಅವಕಾಶ ಸಿಗುವ ಭರವಸೆ ಇದೆ’ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !