ಫುಟ್‌ಬಾಲ್‌: ವಲೆನ್ಸಿಯಾಗೆ ಕೊಪಾ ಡೆಲ್‌ ರೇ ಗರಿ

ಮಂಗಳವಾರ, ಜೂನ್ 18, 2019
23 °C

ಫುಟ್‌ಬಾಲ್‌: ವಲೆನ್ಸಿಯಾಗೆ ಕೊಪಾ ಡೆಲ್‌ ರೇ ಗರಿ

Published:
Updated:
Prajavani

ಸೆವಿಲ್ಲೆ, ಸ್ಪೇನ್‌ : ಬಲಿಷ್ಠ ಬಾರ್ಸಿಲೋನಾ ತಂಡಕ್ಕೆ ಆಘಾತ ನೀಡಿದ ವಲೆನ್ಸಿಯಾ, ಕೊಪಾ ಡೆಲ್‌ ರೇ (ಕಿಂಗ್ಸ್‌ ಕಪ್‌) ಫುಟ್‌ಬಾಲ್‌ ಟೂರ್ನಿಯಲ್ಲಿ ಕಿರೀಟ ಮುಡಿಗೇರಿಸಿಕೊಂಡಿದೆ.

ಶನಿವಾರ ರಾತ್ರಿ ನಡೆದ ಪ್ರಶಸ್ತಿ ಸುತ್ತಿನ ‍ಪೈಪೋಟಿಯಲ್ಲಿ ವಲೆನ್ಸಿಯಾ 2–1 ಗೋಲುಗಳಿಂದ ಗೆದ್ದಿತು.

ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ವಲೆನ್ಸಿಯಾ, 21ನೇ ನಿಮಿಷದಲ್ಲಿ ಖಾತೆ ತೆರೆಯಿತು. ಕೆವಿನ್‌ ಗೆಮೀರೊ ಕಾಲ್ಚಳಕ ತೋರಿದರು. ನಂತರದ ಹತ್ತು ನಿಮಿಷ ಜಿದ್ದಾಜಿದ್ದಿನ ಪೈಪೋಟಿ ಕಂಡುಬಂತು.

33ನೇ ನಿಮಿಷದಲ್ಲಿ ವಲೆನ್ಸಿಯಾ ತಂಡ ಮುನ್ನಡೆ ಹೆಚ್ಚಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ರಾಡ್ರಿಗೊ, ಗೋಲು ಹೊಡೆದು ಕ್ರೀಡಾಂಗಣದಲ್ಲಿ ಮೆಕ್ಸಿಕನ್‌ ಅಲೆ ಏಳುವಂತೆ ಮಾಡಿದರು.

ದ್ವಿತೀಯಾರ್ಧದಲ್ಲಿ ಬಾರ್ಸಿಲೋನಾ ತಂಡದ ಆಟ ರಂಗೇರಿತು. 73ನೇ ನಿಮಿಷದಲ್ಲಿ ಲಯೊನೆಲ್‌ ಮೆಸ್ಸಿ ಮೋಡಿ ಮಾಡಿದರು. ಸಹ ಆಟಗಾರ ತಮ್ಮತ್ತ ತಳ್ಳಿದ ಚೆಂಡನ್ನು ಚುರುಕಾಗಿ ಗುರಿ ಮುಟ್ಟಿಸಿದ ಅವರು ಹಿನ್ನಡೆಯನ್ನು 1–2ಕ್ಕೆ ತಗ್ಗಿಸಿದರು.

ನಂತರದ ಅವಧಿಯಲ್ಲಿ ತಂಡವು ಸಮಬಲದ ಗೋಲು ಗಳಿಸಲು ಸಾಕಷ್ಟು ಪ್ರಯತ್ನಿಸಿತು. ಆದರೆ ವಲೆನ್ಸಿಯಾ ತಂಡದ ರಕ್ಷಣಾ ಕೋಟೆ ಭೇದಿಸಿ ಚೆಂಡನ್ನು ಗುರಿ ಮುಟ್ಟಿಸಲು ಬಾರ್ಸಿಲೋನಾ ಆಟಗಾರರಿಗೆ ಆಗಲಿಲ್ಲ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !