ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್‌: ರೊನಾಲ್ಡೊ ಮ್ಯಾಜಿಕ್‌

Last Updated 21 ಜನವರಿ 2020, 10:57 IST
ಅಕ್ಷರ ಗಾತ್ರ

ಮಿಲಾನ್‌ : ಪೋರ್ಚುಗಲ್‌ನ ಫುಟ್‌ಬಾಲ್‌ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ, ಭಾನುವಾರ ರಾತ್ರಿ ಅಲಯನ್ಸ್‌ ಕ್ರೀಡಾಂಗಣದಲ್ಲಿ ಮೋಡಿ ಮಾಡಿದರು.

ರೊನಾಲ್ಡೊ ಅವರ ಕಾಲ್ಚಳಕದ ಬಲದಿಂದ ಯುವೆಂಟಸ್‌ ತಂಡ ಸೀರಿ ‘ಎ’ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 2–1 ಗೋಲುಗಳಿಂದ ಪಾರ್ಮಾ ತಂಡವನ್ನು ಮಣಿಸಿತು. ಇದರೊಂದಿಗೆ ಒಟ್ಟು ಪಾಯಿಂಟ್ಸ್‌ ಅನ್ನು 51ಕ್ಕೆ ಹೆಚ್ಚಿಸಿಕೊಂಡು ಪಟ್ಟಿಯಲ್ಲಿ ಅಗ್ರಸ್ಥಾನ ಇನ್ನಷ್ಟು ಭದ್ರಪಡಿಸಿಕೊಂಡಿತು.

ಯುವೆಂಟಸ್‌ ಜಯಿಸಿದ ಸತತ ಐದನೇ ಪಂದ್ಯ ಇದಾಗಿದೆ.

ಲೀಗ್‌ನಲ್ಲಿ ಸತತ ಒಂಬತ್ತನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಯುವೆಂಟಸ್‌, ಪಂದ್ಯದ ಆರಂಭದ 40 ನಿಮಿಷಗಳಲ್ಲಿ ಎದುರಾಳಿಗಳಿಂದ ಪ್ರಬಲ ಪೈಪೋಟಿ ಎದುರಿಸಿತು. 43ನೇ ನಿಮಿಷದಲ್ಲಿ ರೊನಾಲ್ಡೊ ಮೋಡಿ ಮಾಡಿದರು.

ದ್ವಿತೀಯಾರ್ಧದ ಆರಂಭದಲ್ಲಿ (55ನೇ ನಿ.) ಪಾರ್ಮಾ ತಂಡದ ಆ್ಯಂಡ್ರೆಸ್‌ ಕಾರ್ನೆಲಿಯಸ್‌ ಗೋಲು ಹೊಡೆದು 1–1 ಸಮಬಲಕ್ಕೆ ಕಾರಣರಾದರು. ಇದರ ಬೆನ್ನಲ್ಲೇ (58ನೇ ನಿ.) ಮತ್ತೊಮ್ಮೆ ಕಾಲ್ಚಳಕ ತೋರಿದ ರೊನಾಲ್ಡೊ, ಯುವೆಂಟಸ್‌ ತಂಡದ ಸಂಭ್ರಮಕ್ಕೆ ಕಾರಣರಾದರು. ಕ್ರಿಸ್ಟಿಯಾನೊ, ಲೀಗ್‌ನಲ್ಲಿ ಒಟ್ಟು 16 ಗೋಲು ಗಳಿಸಿದ ಶ್ರೇಯಕ್ಕೂ ಭಾಜನರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT