ಬೆಂಗಳೂರು: ದರ್ಶ್ ಶುಕ್ಲಾ ಅವರು ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಸೆ.3 ರಿಂದ 13ರ ವರೆಗೆ ನಡೆಯಲಿರುವ ರಾಷ್ಟ್ರೀಯ ಸಬ್ ಜೂನಿಯರ್ (13 ವರ್ಷದೊಳಗಿನವರು) ಫುಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವ ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದಾರೆ.
ಕರ್ನಾಟಕ ತಂಡ ಸೆ.5 ರಂದು ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಉತ್ತರ ಪ್ರದೇಶ ವಿರುದ್ಧ ಪೈಪೋಟಿ ನಡೆಸಲಿದೆ.
ತಂಡ ಹೀಗಿದೆ: ದರ್ಶ್ ಶುಕ್ಲಾ (ನಾಯಕ), ಶಾನ್ ಚೌಧರಿ, ಮೊಹಮ್ಮದ್ ರಯಾನ್ ಸಿದ್ದೀಕ್, ಎಲ್.ಕೆ.ಯುವನ್, ಶ್ರೇಯಸ್ ನಿಂಗನಗೌಡ ಪಾಟೀಲ್, ಯೊಹಾನ್ ಜಾರ್ಜ್, ವಿಜೇತ್ ಸುಮನ್, ಜಿ.ಕಚರಿ, ಲಿಯಾಮ್ ಟೆರೆನ್ಸ್ ಫೆರ್ನಾಂಡೆಸ್, ಹಿಮಾಗ್ನ ಸನ್ಯಾಲ್, ರಿತ್ವಿಕ್ ಟಿ., ರಿದಿತ್ ಮಹೇಶ್ವರಿ, ಕೆ.ಜೊಯೆಲ್ ಅಬ್ರಹಾಂ, ಹವೀಶ್ ಪಿ.ಸಿ., ಪಿ.ಅಖಿಲೇಶ್, ರೋಹನ್ ಎಂ.ಎಂ., ಬಿ.ಜೆ.ಲಕ್ಷಿತ್, ಅರ್ವಿನ್ ಪಿ.ಸಿ., ಎನ್.ರೂನಿಶ್ ಕುಮಾರ್, ವಿರಾಜ್ ಅರೋರಾ, ಯಥಾರ್ಥ್ ಮಿಶ್ರಾ, ಶಿವಾಂಶ್ ಪಾಟೀಲ್.
ಅರೋಕ್ಯನಾಥ್ (ಮುಖ್ಯ ಕೋಚ್), ಆರ್.ಸನತ್ ಕುಮಾರ್ (ಸಹಾಯಕ ಕೋಚ್), ಅಹ್ಮದ್ ಮುಜ್ತಬಾ (ಮ್ಯಾನೇಜರ್)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.