ಲುಸಾನ್: ಇರಾನ್ ಮೇಲೆ ಪ್ರಸ್ತುತ ಅಮೆರಿಕ ಯುದ್ಧ ನಡೆಸುತ್ತಿದೆ. ಆದರೆ ಈ ಯುದ್ಧದ ಹೊರತಾಗಿಯೂ, ಉತ್ತರ ಅಮೆರಿಕದಲ್ಲಿ ನಡೆಯಲಿರುವ ಮುಂದಿನ ವಿಶ್ವಕಪ್ಗೆ ಇರಾನ್ ಪಾಲ್ಗೊಳ್ಳುವಿಕೆಯನ್ನು ‘ಸ್ವಾಗತಿಸುವುದಾಗಿ’ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದಾರೆ.

ಅಧ್ಯಕ್ಷರ ಹೇಳಿಕೆಯನ್ನು ಶ್ವೇತಭವನ ಬುಧವಾರ ಖಚಿತಪಡಿಸಿದೆ. ಫಿಫಾ ಮುಖ್ಯಸ್ಥ ಗಿಯಾನಿ ಇನ್ಫ್ಯಾಂಟಿನೊ ಅವರು ಮಂಗಳವಾರ ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ಟ್ರಂಪ್ ಹೇಳಿಕೆಯನ್ನು ದಾಖಲಿಸಿದ್ದರು.

ವಿಶ್ವಕಪ್ ಸಿದ್ಧತೆಗೆ ಸಂಬಂಧಿಸಿ ನಡೆದ ಟ್ರಂಪ್ ಸಹ ಭಾಗಿಯಾಗಿದ್ದ ಸಭೆಯೊಂದರಲ್ಲಿ ಇರಾನ್ನಲ್ಲಿ ಯುದ್ಧದ ಪರಿಸ್ಥಿತಿಯ ಬಗ್ಗೆ ಇನ್ಫ್ಯಾಂಟಿನೊ ಗಮನಸೆಳೆದಿದ್ದರು. ಆದರೆ ಈ ವೇಳೆ, ಅಮೆರಿಕದಲ್ಲಿ ನಡೆಯುವ ವಿಶ್ವಕಪ್ನಲ್ಲಿ ಇರಾನ್ ತಂಡವನ್ನು ಸ್ವಾಗತಿಸುವುದಾಗಿ ಟ್ರಂಪ್ ಪುನರುಚ್ಚರಿಸಿದ್ದರು ಎಂದು ಇನ್ಫ್ಯಾಂಟಿನೊ ಪೋಸ್ಟ್ನಲ್ಲಿ ಉಲ್ಲೇಖಿಸಿದ್ದರು.

ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿ ಜೂನ್ 11 ರಿಂದ ಜುಲೈ 19ರವರೆಗೆ ಅಮೆರಿಕ, ಮೆಕ್ಸಿಕೊ ಮತ್ತು ಕೆನಡಾ ದೇಶಗಳ ಜಂಟಿ ಆತಿಥ್ಯದಲ್ಲಿ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.