ಬುಧವಾರ, ಅಕ್ಟೋಬರ್ 23, 2019
21 °C
ಪೆನಾಲ್ಟಿ ಶೂಟೌಟ್‌ನಲ್ಲಿ ಸೋತ ಈಸ್ಟ್‌ ಬೆಂಗಾಲ್‌

ಡ್ಯುರಾಂಡ್‌ ಕಪ್‌ ಫೈನಲ್‌ಗೆ ಗೋಕುಲಂ

Published:
Updated:

ಕೋಲ್ಕತ್ತ : ಈಸ್ಟ್‌ ಬೆಂಗಾಲ್‌ ತಮಾನೋತ್ಸವ ಸಂಭ್ರಮದಲ್ಲಿದೆ. ಡ್ಯುರಾಂಡ್‌ ಕಪ್‌ ಗೆದ್ದುಕೊಂಡು ಈ ಸಂದರ್ಭ ಸ್ಮರಣೀಯವಾಗಿಸಬೇಕೆಂಬ ಆ ತಂಡದ ಕನಸು ಬುಧವಾರ ಭಗ್ನಗೊಂಡಿತು. ಈ ಫುಟ್‌ಬಾಲ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಗೋಕುಲಂ ಕೇರಳ ತಂಡ ಪೆನಾಲ್ಟಿ ಶೂಟೌಟ್‌ನ ‌ಲ್ಲಿ 3–2 ರಿಂದ ಈಸ್ಟ್‌ ಬೆಂಗಾಲ್‌ ವಿರುದ್ಧ ಜಯಗಳಿಸಿತು.

ಕಳೆದ ವರ್ಷದವರೆಗೆ ಈಸ್ಟ್‌ ಬೆಂಗಾಲ್‌ನಲ್ಲಿದ್ದು, ಈ ವರ್ಷ ಕೇರಳ ತಂಡಕ್ಕೆ ಹೋದ ಗೋಲ್‌ ಕೀಪರ್‌ ಸಿ.ಕೆ.ಉಬೇದ್‌, ಶೂಟೌಟ್‌ನಲ್ಲಿ ಎರಡು ಯತ್ನಗಳನ್ನು ಮಿಂಚಿನಂತೆ ತಡೆದು ತಂಡದ ಗೆಲುವಿನ ರೂವಾರಿ ಆದರು. ನಿಗದಿ ಆಟ ಮುಗಿದಾಗ ಸ್ಕೋರ್‌ 1–1ರಲ್ಲಿ ಸಮನಾಗಿತ್ತು.
 

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)