ಪರ್ತ್: ಭಾರತ ಸೀನಿಯರ್ ಫುಟ್ಬಾಲ್ ತಂಡವು ಶನಿವಾರ ಮಹಿಳಾ ಎಎಫ್ಸಿ ಏಷ್ಯನ್ ಕಪ್ ಫುಟ್ಬಾಲ್ ಟೂರ್ನಿಯಲ್ಲಿ ಬಲಿಷ್ಠ ಜಪಾನ್ ತಂಡವನ್ನು ಎದುರಿಸಲಿದೆ.

ಸಿ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ 1–2ರಿಂದ ವಿಯೆಟ್ನಾಂ ವಿರುದ್ಧ ಸೋತಿರುವ ಭಾರತದ ವನಿತೆಯರು ಗೆಲುವಿನ ಹಳಿಗೆ ಮರಳುವ ಛಲದಲ್ಲಿದ್ದಾರೆ. ತೈವಾನ್ ತಂಡವನ್ನು 2–0ಯಿಂದ ಮಣಿಸಿ ಅಭಿಯಾನ ಆರಂಭಿಸಿರುವ ಜಪಾನ್ ತಂಡವು ಅಜೇಯ ಓಟ ಮುಂದುವರಿಸುವ ನಿರೀಕ್ಷೆಯಲ್ಲಿದೆ.

ಫಿಫಾ ವಿಶ್ವ ಕ್ರಮಾಂಕದಲ್ಲಿ ಎಂಟನೇ ಸ್ಥಾನದಲ್ಲಿರುವ ಜಪಾನ್, 67ನೇ ಸ್ಥಾನದಲ್ಲಿರುವ ಭಾರತದ ವಿರುದ್ಧದ ಹಿಂದಿನ ಮೂರು ಮುಖಾಮುಖಿಗಳಲ್ಲಿ ಗೆದ್ದು ಪಾಬಲ್ಯ ಮೆರೆದಿದೆ. ಈ ಮೂರು ಪಂದ್ಯಗಳಲ್ಲಿ ಜಪಾನ್ ಆಟಗಾರ್ತಿಯರು ಒಟ್ಟು 19 ಗೋಲು ದಾಖಲಿಸಿದ್ದಾರೆ. 2023ರಲ್ಲಿ ಒಲಿಂಪಿಕ್ ಅರ್ಹತಾ ಸುತ್ತಿನಲ್ಲಿ ಕೊನೆಯ ಬಾರಿ ಮುಖಾಮುಖಿಯಾಗಿದ್ದು, ಆ ಪಂದ್ಯದಲ್ಲಿ ಭಾರತ 0–7ರಿಂದ ಜಪಾನ್ಗೆ ಸೋತಿತ್ತು.

2014 ಮತ್ತು 2018ರಲ್ಲಿ ಏಷ್ಯನ್ ಕಪ್ ಮತ್ತು 2011ರಲ್ಲಿ ವಿಶ್ವಕಪ್ ಚಾಂಪಿಯನ್ ಜಪಾನ್ ತಂಡವನ್ನು ಕಟ್ಟಿಹಾಕುವುದು ‘ಬ್ಲೂ ಟೈಗರ್ಸ್’ ತಂಡಕ್ಕೆ ಕಠಿಣ ಸವಾಲಾಗಿದೆ. ನಾಕೌಟ್ ಪ್ರವೇಶದ ದೃಷ್ಟಿಯಿಂದ ಭಾರತಕ್ಕೆ ಈ ಪಂದ್ಯದ ಗೆಲುವು ಮಹತ್ವದ್ದಾಗಿದೆ.

ವಿಯೆಟ್ನಾಂ ವಿರುದ್ಧ ಕೊನೆಯ ಕ್ಷಣದಲ್ಲಿ (ಸ್ಟಾಪೇಜ್ ಅವಧಿಯಲ್ಲಿ) ಗೋಲು ಬಿಟ್ಟುಕೊಟ್ಟು ಸ್ವೀಟಿ ದೇವಿ ಬಳಗವು ಕೈಸುಟ್ಟುಕೊಂಡಿತ್ತು. ಆ ತಂಡದ ಗನ್ಥಿ ವಾನ್ ಸು (90+4ನೇ ನಿ) ನಿರ್ಣಾಯಕ ಗೋಲು ದಾಖಲಿಸಿದರು. ಅದಕ್ಕೂ ಮುನ್ನ 30ನೇ ನಿಮಿಷದಲ್ಲಿ ಅವರು ತಮ್ಮ ತಂಡಕ್ಕೆ ಮುನ್ನಡೆ ಒದಗಿಸಿದ್ದರು. ಭಾರತದ ಪರ ಏಕೈಕ ಗೋಲನ್ನು ಸನ್ಫಿದಾ ನೊಂಗ್ರುಮ್ (65ನೇ) ದಾಖಲಿಸಿದ್ದರು. ಸನ್ಫಿದಾ ಅವರು ಪದಾರ್ಪಣೆ ಪಂದ್ಯದಲ್ಲೇ ಕಾಲ್ಚಳಕ ತೋರಿದ್ದರು.

‘ನಮ್ಮ ತಂಡವು ಸಮತೋಲನದಿಂದ ಕೂಡಿದೆ. ಜಪಾನ್ ವಿರುದ್ಧದ ಪಂದ್ಯಕ್ಕೆ ಚೇತರಿಸಿಕೊಳ್ಳಲು ಮತ್ತು ತಯಾರಿ ನಡೆಸಲು ಎರಡು ದಿನಗಳು ಲಭಿಸಿದೆ. ಈ ಹಿಂದಿನ ಪಂದ್ಯದಂತೆಯೇ ಜಪಾನ್ ಎದುರು ಸ್ಪರ್ಧಾತ್ಮಕ ಪ್ರದರ್ಶನ ನೀಡುವ ಗುರಿ ಹೊಂದಿದ್ದೇವೆ’ ಎಂದು ಭಾರತ ತಂಡದ ಮುಖ್ಯ ಕೋಚ್ ಅಮೇಲಿಯಾ ವಲ್ವೆರ್ಡೆ ಹೇಳಿದ್ದಾರೆ.

ಶನಿವಾರ ನಡೆಯುವ ಮತ್ತೊಂದು ಸಿ ಗುಂಪಿನ ಪಂದ್ಯದಲ್ಲಿ ವಿಯೆಟ್ನಾಂ ಮತ್ತು ತೈವಾನ್ ತಂಡಗಳು ಮುಖಾಮುಖಿಯಾಗಲಿವೆ.

ಮೂರು ಗುಂಪುಗಳಿಂದ ಅಗ್ರ ಎರಡು ತಂಡಗಳು, ಜೊತೆಗೆ ಮೂರನೇ ಸ್ಥಾನದಲ್ಲಿರುವ ಎರಡು ಅತ್ಯುತ್ತಮ ತಂಡಗಳು ಕ್ವಾರ್ಟರ್ ಫೈನಲ್ಗೆ ಟಿಕೆಟ್ ಪಡೆಯಲಿದೆ. ಕ್ವಾರ್ಟರ್ ಫೈನಲ್ ಪಂದ್ಯಗಳ ವಿಜೇತರು ಬ್ರೆಜಿಲ್ನಲ್ಲಿ ನಡೆಯಲಿರುವ 2027ರ ಫಿಫಾ ಮಹಿಳಾ ವಿಶ್ವಕಪ್ಗೆ ಅರ್ಹತೆ ಪಡೆಯುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.