ಫುಟ್‌ಬಾಲ್‌: ಎಡಿಸನ್ 4 ಗೋಲು

ಬುಧವಾರ, ಜೂನ್ 19, 2019
26 °C

ಫುಟ್‌ಬಾಲ್‌: ಎಡಿಸನ್ 4 ಗೋಲು

Published:
Updated:

ಬೆಂಗಳೂರು: ಎಡಿಸನ್ ಜೋಸೆಫ್ ಗಳಿಸಿದ ನಾಲ್ಕು ಗೋಲುಗಳ ನೆರವಿನಿಂದ ಜಾಲಿ ಬ್ರದರ್ಸ್ ಎಫ್‌ಸಿ ತಂಡ ಬಿಡಿಎಫ್ಎ ಆಶ್ರಯದ ’ಸಿ’ ಡಿವಿಷನ್ ಲೀಗ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಶನಿವಾರ ಭರ್ಜರಿ ಜಯ ಗಳಿಸಿತು.

ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ನಡೆದ ‘ಕೆ’ ವಲಯದ ಪಂದ್ಯದಲ್ಲಿ ಜಾಲಿ ಬ್ರದರ್ಸ್ 7–1ರಿಂದ ವೇಲು ಸೋಷಿಯಲ್ಸ್ ಎಫ್‌ಸಿಯನ್ನು ಮಣಿಸಿತು.

ಏಳನೇ ನಿಮಿಷದಲ್ಲಿ ದೊರೈ ಗಳಿಸಿದ ಗೋಲಿನ ಮೂಲಕ ಮುನ್ನಡೆ ಸಾಧಿಸಿದ ಜಾಲಿ ಬ್ರದರ್ಸ್‌ಗೆ ಒಂಬತ್ತನೇ ನಿಮಿಷದಲ್ಲಿ ಸಂಜಯ್‌ ಮತ್ತೊಂದು ಗೋಲು ತಂದಿತ್ತರು. ನಂತರ ಎಡಿಸನ್ ಗೋಲುಗಳ ಮಳೆ ಸುರಿಸಿದರು. 11, 18 ಮತ್ತು 28ನೇ ನಿಮಿಷದಲ್ಲಿ ಅವರು ತೋರಿದ ಕಾಲ್ಚಳಕದಿಂದ ತಂಡದ ಮುನ್ನಡೆ 5–0ಗೆ ಏರಿತು.

ಈ ಸಂದರ್ಭದಲ್ಲಿ ಎದುರಾಳಿ ತಂಡದ ಪ್ರಕಾಶ್ (41ನೇ ನಿಮಿಷ) ಗೋಲು ಗಳಿಸಿದರು. ಆದರೆ 57ನೇ ನಿಮಿಷದಲ್ಲಿ ಅಜರಯ್ಯ ಕುಮಾರ್ ಜಾಲಿ ಬ್ರದರ್ಸ್‌ನ ಮುನ್ನಡೆಯನ್ನು ಮತ್ತಷ್ಟು ಹೆಚ್ಚಿಸಿದರು. ಎರಡು ನಿಮಿಷಗಳ ನಂತರ ಎಡಿಸನ್ ವೈಯಕ್ತಿಕ ನಾಲ್ಕನೇ ಗೋಲು ಗಳಿಸಿ ಎದುರಾಳಿಗಳ ಸಂಕಷ್ಟವನ್ನು ಹೆಚ್ಚಿಸಿದರು.

ಅಫ್ಗಾನ್ ಎಫ್‌ಸಿಗೆ ಭಾರಿ ಜಯ: ಮತ್ತೊಂದು ಪಂದ್ಯದಲ್ಲಿ ಅಫ್ಗಾನ್ ಎಫ್‌ಸಿ 6–0ಯಿಂದ ವಿನಾಯಕ ಎಫ್‌ಸಿಯನ್ನು ಸೋಲಿಸಿತು. ವಿಜಯಿ ತಂಡಕ್ಕೆ ಮೊದಲನೇ ಗೋಲನ್ನು ವಿನಾಯಕ ತಂಡದ ಮಣಿ (4ನೇ ನಿ) ‘ಕೊಡುಗೆ’ ನೀಡಿದರು.

ಡೇವಿಡ್‌ (5, 48ನೇ ನಿ) ಎರಡು ಬಾರಿ ಮತ್ತು ಪ್ರಶಾಂತ್‌ (27ನೇ ನಿ), ಅಲನ್‌ (40ನೇ ನಿ), ರೋಷನ್‌ (53ನೇ ನಿ) ತಲಾ ಒಂದೊಂದು ಬಾರಿ ಚೆಂಡನ್ನು ಗುರಿ ಮುಟ್ಟಿಸಿದರು.

ಫ್ರೀಡಂ ಎಫ್‌ಸಿ 5–0 ಗೋಲುಗಳಿಂದ ಹಿಂದು ಸೋಷಿಯಲ್‌ ಎಫ್‌ಸಿ ಎದುರು ಗೆದ್ದಿತು. ಸರವಣ (31, 41ನೇ ನಿ), ಲಾರೆನ್ಸ್‌ (34, 36ನೇ ನಿ) ಹಾಗೂ ಪ್ರವೀಣ್ ಆರ್‌ (48ನೇ ನಿ) ಗೋಲು ಗಳಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !