ಭಾನುವಾರ, ಜನವರಿ 19, 2020
29 °C

ಬಿಎಫ್‌ಸಿ | ಲಾಲ್ರಿಂದಿಕಾ ಜೊತೆ ಬಿಎಫ್‌ಸಿ ಒಪ್ಪಂದ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು : ಇಂಡಿಯನ್‌ ಸೂಪರ್‌ ಲೀಗ್‌ನಲ್ಲಿ (ಐಎಸ್‌ಎಲ್‌) ಆಡುವ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡವು ಯುವ ಸ್ಟ್ರೈಕರ್‌ ಎಡ್ಮಂಡ್‌ ಲಾಲ್ರಿಂದಿಕಾ ಜೊತೆ ಮಂಗಳವಾರ ಹೊಸದಾಗಿ ಒಪ್ಪಂದ ಮಾಡಿಕೊಂಡಿದೆ.

ನೂತನ ಒಪ್ಪಂದದ ಪ್ರಕಾರ 20 ವರ್ಷ ವಯಸ್ಸಿನ ಲಾಲ್ರಿಂದಿಕಾ ಅವರು ಮುಂದಿನ ಎರಡು ವರ್ಷಗಳ ಕಾಲ ಬಿಎಫ್‌ಸಿ ಪರ ಆಡಲಿದ್ದಾರೆ.

2017–18ನೇ ಋತುವಿನಲ್ಲಿ ಬಿಎಫ್‌ಸಿ ಸೇರಿದ್ದ ಎಡ್ಮಂಡ್‌, ಐಎಸ್‌ಎಲ್‌ನಲ್ಲಿ ಇದುವರೆಗೂ ಏಳು ಪಂದ್ಯಗಳನ್ನು ಆಡಿದ್ದಾರೆ.

ಇತ್ತೀಚೆಗೆ ನಡೆದಿದ್ದ ಬಿಡಿಎಫ್‌ಎ ಸೂಪರ್‌ ಡಿವಿಷನ್‌ ಲೀಗ್‌ನಲ್ಲಿ ಬಿಎಫ್‌ಸಿ–ಬಿ ತಂಡವು ಪ್ರಶಸ್ತಿ ಗೆಲ್ಲುವಲ್ಲಿ ಅವರು ನಿರ್ಣಾಯಕ ಪಾತ್ರವಹಿಸಿದ್ದರು. ಡುರಾಂಡ್‌ ಕಪ್‌ನಲ್ಲೂ ಬಿಎಫ್‌ಸಿ ಪರ ಕಣಕ್ಕಿಳಿದು ಗಮನ ಸೆಳೆದಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು