ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

23 ವರ್ಷದೊಳಗಿನವರ ಫುಟ್‌ಬಾಲ್‌: ಭಾರತ ತಂಡಕ್ಕೆ ಜಯ

Last Updated 31 ಆಗಸ್ಟ್ 2018, 16:06 IST
ಅಕ್ಷರ ಗಾತ್ರ

ನವದೆಹಲಿ : ಫಾರುಖ್‌ ಚೌಧರಿ ಹಾಗೂ ಮನ್ವೀರ್‌ ಸಿಂಗ್‌ ಅವರು ಗಳಿಸಿದ ಗೋಲುಗಳ ನೆರವಿನಿಂದ ಭಾರತದ 23 ವರ್ಷದೊಳಗಿನವರ ಫುಟ್‌ಬಾಲ್‌ ತಂಡವು ರೈಡಲ್ಮೆರ್‌ ಲಯನ್ಸ್‌ ಫುಟ್‌ಬಾಲ್‌ ತಂಡದ ಎದುರಿನ ಅಭ್ಯಾಸ ಪಂದ್ಯದಲ್ಲಿ ಜಯಿಸಿದೆ.

ಶುಕ್ರವಾರ ಸಿಡ್ನಿಯ ವ್ಯಾಲೆಂಟೈನ್‌ ಸ್ಪೋರ್ಟ್ಸ್‌ ಪಾರ್ಕ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡವು 4–0ಯಿಂದ ರೈಡಲ್ಮೆರ್‌ ಲಯನ್ಸ್‌ ಫುಟ್‌ಬಾಲ್‌ ಕ್ಲಬ್‌ ವಿರುದ್ದ ಗೆದ್ದಿತು.

ಈ ಪಂದ್ಯದಲ್ಲಿ ಫಾರುಖ್‌ ಚೌಧರಿ (6ನೇ ನಿ., 38ನೇ ನಿ.) ಹಾಗೂ ಮನ್ವೀರ್‌ ಸಿಂಗ್‌ (74ನೇ ನಿ., 77ನೇ ನಿ.) ಅವರು ತಲಾ ಎರಡು ಗೋಲು ದಾಖಲಿಸಿದರು.

ಸಿಡ್ನಿಯಲ್ಲಿ ನಡೆಯುತ್ತಿರುವ ತರಬೇತಿ ಶಿಬಿರದಲ್ಲಿ ಭಾಗಿಯಾಗಿರುವ ಭಾರತ ತಂಡವು ಆಡಿರುವ ಮೂರು ಅಭ್ಯಾಸ ಪಂದ್ಯಗಳಲ್ಲಿ ಎರಡರಲ್ಲಿ ಜಯಿಸಿದೆ. ಸಿಡ್ನಿ ಫುಟ್‌ಬಾಲ್‌ ಕ್ಲಬ್‌ ಎದುರಿನ ಪಂದ್ಯದಲ್ಲಿ ಸೋತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT