ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್: ಎಫ್‌ಸಿಬಿಯುಗೆ ಸೆವಿಲ್ಲಾ ನೆರವು

Last Updated 9 ಜೂನ್ 2022, 19:32 IST
ಅಕ್ಷರ ಗಾತ್ರ

ಬೆಂಗಳೂರು: ಫುಟ್‌ಬಾಲ್ ಕ್ರೀಡೆಯ ಬೆಳವಣಿಗೆಯ ನಿಟ್ಟಿನಲ್ಲಿ ಎಫ್‌ಸಿ ಬೆಂಗಳೂರು ಯುನೈಟೆಡ್‌ ತಂಡದೊಂದಿಗೆ ಸ್ಪೇನ್‌ನ ಮುಂಚೂಣಿ ಕ್ಲಬ್‌ ಸೆವಿಲ್ಲಾ ಎಫ್‌ಸಿ ಒಪ್ಪಂದವನ್ನು ಅಂತಿಮಗೊಳಿಸಿವೆ.

ಭಾರತದಲ್ಲಿ ತನ್ನ ಬ್ರ್ಯಾಂಡ್‌ ಬೆಳವಣಿಗೆಯನ್ನು ಇನ್ನಷ್ಟು ವೃದ್ಧಿಸಿಕೊಳ್ಳಲು ಸೆವಿಲ್ಲಾ ಈ ನಿರ್ಧಾರಕ್ಕೆ ಬಂದಿದೆ. 2021ರ ಜನವರಿಯಲ್ಲೇ ಉಭಯ ಕ್ಲಬ್‌ಗಳು ಈ ಒಪ್ಪಂದಕ್ಕೆ ಸಹಿ ಹಾಕಿದ್ದವು.

ಅಧ್ಯಕ್ಷ ಜೋಸ್ ಕ್ಯಾಸ್ಟ್ರೊ ಕಾರ್ಮೊನಾ, ಕಾರ್ಯನಿರ್ವಹಣಾಧಿಕಾರಿ ಜೋಸ್ ಮರಿಯಾ ಕ್ರೂಜ್‌ ಅವರನ್ನೊಳಗೊಂಡ ಸೆವಿಲ್ಲಾ ಪ್ರತಿನಿಧಿಗಳ ತಂಡವು ಬುಧವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿತು.

‘ಮುಂದಿನ ವರ್ಷ ಐ ಲೀಗ್‌ ಟೂರ್ನಿಗೆ ಪ್ರವೇಶ ಪಡೆಯುವ ಹಂಬಲದಲ್ಲಿರುವ ಎಫ್‌ಸಿಬಿಯುಗೆ ಕೋಚ್‌, ಅಕಾಡೆಮಿ ಮತ್ತಿತರ ನೆರವು ನೀಡಲಿದ್ದೇವೆ‘ ಎಂದು ಜೋಸ್ ಮರಿಯಾ ಕ್ರೂಜ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT