ವಾಷಿಂಗ್ಟನ್: ಯುದ್ಧದ ನಡುವೆಯೂ 2026ರ ವಿಶ್ವಕಪ್ನಲ್ಲಿ ಇರಾನ್ ಭಾಗವಹಿಸಲಿದೆ ಎಂದು ಫಿಫಾ ಅಧ್ಯಕ್ಷ ಜಿಯಾನಿ ಇನ್ಫಾಂಟಿನೋ ಬುಧವಾರ ತಿಳಿಸಿದ್ದಾರೆ.
.ಮತ್ತೆ ಮಾತುಕತೆ | ಅಂತ್ಯದತ್ತ ಇರಾನ್ ಯುದ್ಧ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್.
ಸಿಎನ್ಬಿಸಿ ಆಯೋಜಿಸಿದ್ದ ಆರ್ಥಿಕ ಸಮ್ಮೇಳನದಲ್ಲಿ ಮಾತನಾಡಿದ ಇನ್ಫಾಂಟಿನೋ, ‘ಇರಾನ್ ಖಂಡಿತವಾಗಿಯೂ ಭಾಗವಹಿಸುತ್ತಿದೆ. ಅಷ್ಟರೊಳಗೆ ಪರಿಸ್ಥಿತಿ ಶಾಂತವಾಗಲಿದೆ’ ಎಂದು ಅವರು ಹೇಳಿದ್ದಾರೆ.

ಈ ವರ್ಷ ಜೂನ್ನಲ್ಲಿ ಅಮೆರಿಕ, ಕೆನಡಾ ಮತ್ತು ಮೆಕ್ಸಿಕೊ ಆತಿಥ್ಯದಲ್ಲಿ ಫಿಫಾ ವಿಶ್ವಕಪ್ ನಡೆಯಲಿದೆ.

‘ಇರಾನ್ ಪಂದ್ಯಕೂಟದಲ್ಲಿ ಭಾಗವಹಿಸಲೇಬೇಕು.ಅವರು ತಮ್ಮ ಜನರನ್ನು ಪ್ರತಿನಿಧಿಸುತ್ತಾರೆ. ಅವರು ಅರ್ಹತೆ ಪಡೆದಿದ್ದಾರೆ. ಆಟಗಾರರು ಆಡಲು ಬಯಸುತ್ತಾರೆ’ ಎಂದು ಹೇಳಿದ್ದಾರೆ.

‘ಕ್ರೀಡೆಯು ರಾಜಕೀಯದಿಂದ ಹೊರಗಿರಬೇಕು. ನಾವು ಸೇತುವೆ ನಿರ್ಮಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಇನ್ಫಾಂಟಿನೋ ಹೇಳಿದ್ದಾರೆ.
.ನೌಕೆಗಳಲ್ಲಿದ್ದ 238 ಇರಾನ್ ನಾವಿಕರು ಶ್ರೀಲಂಕಾದಿಂದ ಸ್ವದೇಶಕ್ಕೆ .
ಇರಾನ್ ಆಟಗಾರರು ಅಮೆರಿಕದಲ್ಲಿ ಸುರಕ್ಷಿತರಾಗಿ ಇಲ್ಲದಿರಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು.

ಜಿ ಗುಂಪಿನಲ್ಲಿರುವ ಇರಾನ್ ಮೂರು ಪಂದ್ಯಗಳನ್ನು ಆಡಲಿದ್ದು ಎರಡು ಪಂದ್ಯಗಳು ಲಾಸ್ ಏಂಜಲೀಸ್ನಲ್ಲಿ ಮತ್ತು ಒಂದು ಪಂದ್ಯ ಸಿಯಾಟಲ್ನಲ್ಲಿ ನಡೆಯಲಿದೆ. ತರಬೇತಿ ಶಿಬಿರವು ಅರಿಜೋನಾದ ಟಕ್ಸನ್ನಲ್ಲಿ ನಡೆಯಲಿದೆ.

ತನ್ನ ಪಂದ್ಯಗಳನ್ನು ಅಮೆರಿಕದಿಂದ ಮೆಕ್ಸಿಕೊಗೆ ಸ್ಥಳಾಂತರಿಸಬೇಕು ಎಂದು ಫಿಫಾವನ್ನು ಇರಾನ್ ಕೋರಿತ್ತು. ಆದರೆ ಅದು ತಿರಸ್ಕೃತಗೊಂಡಿತ್ತು.

(ಎಫ್ಪಿ ವರದಿ)
.ಅಮೆರಿಕ ಸೇನಾ ನೆಲೆಗಳ ಮೇಲೆ ದಾಳಿಗೆ ಚೀನಾದ ಗೂಢಾಚಾರ ಉಪಗ್ರಹ ಬಳಸಿದ್ದ ಇರಾನ್!.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.