ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಟ್ರಿ ಸಾಧನೆಯ ‘ಕ್ಯಾಪ್ಟನ್‌ ಫೆಂಟಾಸ್ಟಿಕ್‌’ ಬಿಡುಗಡೆ

ಭಾರತ ತಂಡದ ನಾಯಕನಿಗೆ ಫಿಫಾ ಗೌರವ
Last Updated 28 ಸೆಪ್ಟೆಂಬರ್ 2022, 12:52 IST
ಅಕ್ಷರ ಗಾತ್ರ

ನವದೆಹಲಿ: ಭಾರತ ತಂಡದ ನಾಯಕ ಸುನಿಲ್ ಚೆಟ್ರಿ ಅವರ ವೃತ್ತಿಜೀವನ ಮತ್ತು ಸಾಧನೆಗಳನ್ನು ತಿಳಿಸುವ ಮೂರು ಕಂತುಗಳ ವಿಡಿಯೊ ಸರಣಿಯನ್ನು ಅಂತರರಾಷ್ಟ್ರೀಯ ಫುಟ್‌ಬಾಲ್ ಮಂಡಳಿ (ಫಿಫಾ) ಬಿಡುಗಡೆ ಮಾಡಿದೆ. ಈ ಮೂರೂ ಕಂತುಗಳು ಫಿಫಾ ಪ್ಲಸ್‌ನಲ್ಲಿ ಪ್ರಸಾರವಾಗುತ್ತಿವೆ.

ಈ ಸಂಚಿಕೆಗಳಿಗೆ ‘ಕ್ಯಾಪ್ಟನ್ ಫೆಂಟಾಸ್ಟಿಕ್’ ಎಂಬ ಶೀರ್ಷಿಕೆಯನ್ನು ಫಿಫಾ ನೀಡಿದೆ.

‘ರೊನಾಲ್ಡೊ ಮತ್ತು ಮೆಸ್ಸಿ ಅವರ ಬಗ್ಗೆ ನಿಮಗೆ ಗೊತ್ತು. ಅಂತರರಾಷ್ಟ್ರೀಯ ಫುಟ್‌ಬಾಲ್‌ನ ಸಕ್ರಿಯ ಆಟಗಾರರಲ್ಲಿ ಅತಿ ಹೆಚ್ಚು ಗೋಲು ಗಳಿಸಿರುವ ಮೂರನೇ ವ್ಯಕ್ತಿ ಎಂಬ ಶ್ರೇಯ ಗಳಿಸಿರುವ ಆಟಗಾರನ ಪರಿಚಯವನ್ನು ಮಾಡಿಕೊಳ್ಳಿ.ಸುನಿಲ್ ಚೆಟ್ರಿ/ ಕ್ಯಾಪ್ಟನ್ ಫೆಂಟಾಸ್ಟಿಕ್‌ ಈಗ ಫಿಫಾ ಪ್ಲಸ್‌ನಲ್ಲಿ ಲಭ್ಯ‘ ಎಂದು ಫಿಫಾ ಟ್ವೀಟ್ ಮಾಡಿದೆ.

38 ವರ್ಷದ ಚೆಟ್ರಿ ಅಂತರರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ 84 ಗೋಲು ಗಳಿಸಿದ್ದಾರೆ. ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ (117) ಮತ್ತು ಅರ್ಜೆಂಟೀನಾದ ಲಯೊನೆಲ್ ಮೆಸ್ಸಿ (90) ಅವರು ಸಕ್ರಿಯ ಆಟಗಾರರ ಪೈಕಿ ಗೋಲು ಗಳಿಕೆಯಲ್ಲಿ ಮೊದಲೆರಡು ಸ್ಥಾನಗಳಲ್ಲಿದ್ದಾರೆ.

ಫಿಫಾ ಬಿಡುಗಡೆ ಮಾಡಿರುವ ಮೊದಲ ಕಂತಿನಲ್ಲಿ, ಚೆಟ್ರಿ ಅವರು ತಮ್ಮ 20ನೇ ವಯಸ್ಸಿನಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ಕುರಿತ ಚಿತ್ರಣವಿದೆ. ಈ ಬಗ್ಗೆ ಅವರ ಆಪ್ತರು, ಪ್ರೀತಿಪಾತ್ರರು, ಸಹ ಆಟಗಾರರು ಮಾತನಾಡಿದ್ದಾರೆ. ರಾಷ್ಟ್ರೀಯ ತಂಡಕ್ಕಾಗಿ ಅವರು ನೀಡಿದ ಅದ್ಭುತ ಪ್ರದರ್ಶನ ಮತ್ತು ವೃತ್ತಿಪರ ಆಟಗಾರನಾಗಿ ವಿಶ್ವದ ಪ್ರಮುಖ ಕ್ಲಬ್‌ಗಳನ್ನು ಪ್ರತಿನಿಧಿಸುವ ಕನಸುಗಳ ಕುರಿತು ಎರಡನೇ ಕಂತು ಬೆಳಕು ಚೆಲ್ಲುತ್ತದೆ.

ಮೂರನೇ ಕಂತಿನಲ್ಲಿ, ಚೆಟ್ರಿ ಅವರು ವೃತ್ತಿಜೀವನದಲ್ಲಿ ಏರಿದ ಎತ್ತರ ಮತ್ತು ವೈಯಕ್ತಿಕ ಜೀವನ, ದಾಖಲೆಗಳ ಕುರಿತು ವಿವರಿಸಲಾಗಿದೆ.

ಚೆಟ್ರಿ ಅವರು 2005ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದು, ಇದುವರೆಗೆ 131 ಪಂದ್ಯಗಳನ್ನು ಆಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT