7

ಮೊದಲ ಸೆಮಿಗೆ ಕ್ಷಣಗಣನೆ: ಫ್ರಾನ್ಸ್–ಬೆಲ್ಜಿಯಂ ಹಣಾಹಣಿ

Published:
Updated:

ಸೇಂಟ್‌ ಪೀಟರ್ಸ್‌ಬರ್ಗ್‌: ಫಿಫಾ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ ಮೊದಲ ಸೆಮಿಫೈನಲ್‌ ಪಂದ್ಯ ಇಲ್ಲಿನ ಸೇಂಟ್ ಪೀಟರ್ಸ್‌ಬರ್ಗ್‌ ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ನಡೆಯಲಿದೆ.

ಈ ಸೆಮಿಫೈನಲ್‌ ಪಂದ್ಯದಲ್ಲಿ ಫ್ರಾನ್ಸ್ ತಂಡ ಬೆಲ್ಜಿಯಂ ಎದುರು ಸೆಣಸಲಿದ್ದು ಉಭಯ ತಂಡಗಳ ನಡುವಿನ ಸೆಣಸಾಟ ಕುತೂಹಲ ಕೆರಳಿಸಿದೆ.ಆಕ್ರಮಣಕಾರಿ ಆಟಕ್ಕೆ ಹೆಸರಾಗಿರುವ ಈ ತಂಡಗಳ ಹೋರಾಟವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ.

ಈಡನ್‌ ಹಜಾರ್ಡ್‌ ಸಾರಥ್ಯದ ಬೆಲ್ಜಿಯಂ ತಂಡ ಈ ಬಾರಿ ಅಜೇಯವಾಗಿ ನಾಲ್ಕರ ಘಟ್ಟ ಪ್ರವೇಶಿಸಿದೆ. ಐದು ಪಂದ್ಯಗಳನ್ನು ಆಡಿರುವ ಹಜಾರ್ಡ್‌ ಪಡೆ 14 ಗೋಲುಗಳನ್ನು ದಾಖಲಿಸಿದೆ. ಕ್ವಾರ್ಟರ್‌ ಫೈನಲ್‌ನಲ್ಲಿ ಈ ತಂಡ ಬ್ರೆಜಿಲ್‌ ತಂಡವನ್ನು ಮಣಿಸಿತ್ತು. ರೊಮೆಲು ಲುಕಾಕು ಮತ್ತು ನಾಯಕ ಹಜಾರ್ಡ್‌ ಗೋಲು ಗಳಿಸುವ ನಿರೀಕ್ಷೆ ಇದೆ. 

ಫ್ರಾನ್ಸ್‌ ಕೂಡಾ ವಿಶ್ವಾಸದ ಗಣಿಯಾಗಿದೆ. 1998ರಲ್ಲಿ ವಿಶ್ವಕಪ್‌ನಲ್ಲಿ ಟ್ರೋಫಿ ಗೆದ್ದಿದ್ದ ಈ ತಂಡ ಈ ಬಾರಿಯೂ ಪ್ರಶಸ್ತಿ ಗೆಲ್ಲುವ ಫೇವರೇಟ್‌ ಎನಿಸಿದೆ. ‍ಪಾಲ್‌ ಪೊಗ್ಬಾ, ಆ್ಯಂಟೋಯಿನ್‌ ಗ್ರೀಜ್‌ಮನ್‌ ಮತ್ತು 19ರ ಹರೆಯದ ಕೈಲಿಯನ್‌ ಬಾಪೆ ಅವರ ಆಟ ಮತ್ತೊಮ್ಮೆ ರಂಗೇರುವ ನಿರೀಕ್ಷೆ ಯಲ್ಲಿ ಅಭಿಮಾನಿಗಳು ಇದ್ದಾರೆ.

 ಉಭಯ ತಂಡಗಳು ಇದುವರೆಗೂ 73 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಫ್ರಾನ್ಸ್‌ 24 ಪಂದ್ಯಗಳಲ್ಲಿ ಗೆದ್ದರೆ, ಬೆಲ್ಜಿಯಂ 30ರಲ್ಲಿ ಗೆಲುವು ದಾಖಲಿಸಿದೆ.

ಪಂದ್ಯ ಆರಂಭ: ರಾತ್ರಿ 11.30   

ಸ್ಥಳ: ಸೇಂಟ್‌ ಪೀಟರ್ಸ್‌ಬರ್ಗ್‌

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !