ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

FIFA World Cup 2022 | ಗಾಯದ ಕಾಟ; ಇವರಿಗಿಲ್ಲ ಆಟ!

Last Updated 19 ನವೆಂಬರ್ 2022, 20:30 IST
ಅಕ್ಷರ ಗಾತ್ರ

ಫುಟ್‌ಬಾಲ್ ಮಹಾಮೇಳಕ್ಕೆ ವೇದಿಕೆ ಸಿದ್ಧವಾಗಿದೆ. ತಮ್ಮ ನೆಚ್ಚಿನ ತಂಡಗಳ ಆಟವನ್ನು ಕಣ್ತುಂಬಿಕೊಳ್ಳಲು ವಿಶ್ವದಾದ್ಯಂತ ಅಭಿಮಾನಿಗಳೂ ಸಿದ್ಧರಾಗಿದ್ದಾರೆ. ಆದರೆ, ಈ ಬಾರಿ ಕೆಲವು ಖ್ಯಾತನಾಮ ಆಟಗಾರರು ಟೂರ್ನಿಯಲ್ಲಿ ಆಡುತ್ತಿಲ್ಲ.

* ಪಾಲ್ ಪೊಗ್ಬಾ (ಫ್ರಾನ್ಸ್)
29 ವರ್ಷದ ಆಟಗಾರ ಪಾಲ್ ಹಾಲಿ ಚಾಂಪಿಯನ್ ತಂಡದ ಮಿಡ್‌ಫೀಲ್ಡರ್. ಎರಡು ತಿಂಗಳ ಹಿಂದೆ ವಿಶ್ವಕಪ್‌ಗಾಗಿ ತರಬೇತಿ ಪಡೆಯುತ್ತಿದ್ದಾಗಲೇ ಮೊಣಕಾಲಿಗೆ ಗಾಯವಾಗಿ ವಿಶ್ರಾಂತಿ ಪಡೆದರು. ಸೆಪ್ಟೆಂಬರ್‌ನಲ್ಲಿ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆದರೆ ಅವರಿಗೆ ದೀರ್ಘ ಕಾಲದ ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದರು. ಆದ್ದರಿಂದ ವಿಶ್ವಕಪ್ ಟೂರ್ನಿಯಲ್ಲಿ ಕಣಕ್ಕಿಳಿಯುವುದಿಲ್ಲವೆಂದು ಅವರ ಮ್ಯಾನೇಜರ್ ಅ.31ರಂದು ತಿಳಿಸಿದ್ದರು.

* ಎನ್‌ ಗೊಲೊ ಕಾಂಟೆ (ಫ್ರಾನ್ಸ್)
ಚೆಲ್ಸಿ ಕ್ಲಬ್‌ನ ಪ್ರಮುಖ ಆಟಗಾರ. ಆದರೆ, ತೊಡೆಯ ಸ್ನಾಯುವಿನ ಗಾಯದಿಂದ ಕಳೆದೆರಡು ಲೀಗ್‌ಗಳಲ್ಲಿ ಆಡುವ ಅವಕಾಶ ತಪ್ಪಿಸಿಕೊಂಡರು. ಶಸ್ತ್ರಚಿಕಿತ್ಸೆ ನಂತರ ಅವರು ನಾಲ್ಕು ತಿಂಗಳು ಕಣದಿಂದ ದೂರ ಉಳಿದಿದ್ದರು.

* ಟೈಮೊ ವೆರ್ನರ್ (ಜರ್ಮನಿ)
ಹಿಮ್ಮಡಿಯ ಗಾಯದಿಂದಾಗಿ ಫಾರ್ವರ್ಡ್ ಆಟಗಾರ ಟೈಮೊ ವಿಶ್ವಕಪ್‌ನಿಂದ ಹೊರಬಿದ್ದಿದ್ದಾರೆ.

* ಡಿಯೊಗೊ ಜೊಟಾ (ಪೋರ್ಚುಗಲ್)
ಲಿವರ್‌ಪೂಲ್ ಫಾರ್ವರ್ಡ್ ಆಟಗಾರ ಮೀನಖಂಡದ ಗಾಯಕ್ಕೆ ತುತ್ತಾಗಿದ್ದಾರೆ. ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅವರು ಗಾಯಗೊಂಡಿದ್ದರು.

* ಜಿಯೊವನಿ ಲೊ ಸೆಲ್ಸೊ (ಅರ್ಜೆಂಟಿನಾ)
ಮಿಡ್‌ಫೀಲ್ಡರ್ ಆಗಿರುವ ಆಟಗಾರ ಸ್ನಾಯುಸೆಳೆತದಿಂದ ಬಳಲಿದ್ದಾರೆ. ತಂಡದಲ್ಲಿ ಅವರು ಪ್ರಮುಖ ಆಟಗಾರರಾಗಿದ್ದರು. ಅವರ ಸ್ಥಾನವನ್ನು ತುಂಬಬಲ್ಲವರು ಯಾರೂ ಇಲ್ಲ ಎಂದು ಕೋಚ್ ಲಯೊನೆಲ್ ಸ್ಕೆಲೊನಿ ಹೇಳಿದ್ದಾರೆ.

* ಯುಟಾ ನಕಾಯಾಮ (ಜಪಾನ್)
ಸ್ನಾಯುರಜ್ಜುವಿನ ಗಾಯದಿಂದಾಗಿ ಟೂರ್ನಿಯಿಂದ ಹೊರಗುಳಿಯಲಿದ್ದಾರೆ. ಜಪಾನ್ ತಂಡಕ್ಕೆ ಇವರು ಪ್ರಮುಖ ಡಿಫೆಂಡರ್.

* ಸ್ಯಾಡಿಯೊ ಮಾನಿ (ಸೆನೆಗಲ್)
ಬೇರನ್ ಮ್ಯೂನಿಕ್‌ ತಂಡದಲ್ಲಿ ಆಡುವಾಗ ಗಾಯಗೊಂಡಿದ್ದರು. ಆದರೂ ಅವರನ್ನು ವಿಶ್ವಕಪ್‌ ಟೂರ್ನಿಯಲ್ಲಿ ಆಡುವ ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಆದರೆ ಅವರ ಗಾಯಕ್ಕೆ ಶಸ್ತ್ರಚಿಕಿತ್ಸೆಯ ಅಗತ್ಯವಿದ್ದ ಕಾರಣ ತಂಡದಿಂದ ಕೈಬಿಡಲಾಯಿತು.

* ರೀಸ್ ಜೇಮ್ಸ್ (ಇಂಗ್ಲೆಂಡ್)
22ವರ್ಷದ ರೈಟ್ ಬ್ಯಾಕ್‌ ಆಟಗಾರ. ಚಾಂಪಿಯನ್ಸ್‌ ಲೀಗ್ ಟೂರ್ನಿಯಲ್ಲಿ ಚೆಲ್ಸಿಸ್ ಮತ್ತು ಎ.ಸಿ. ಮಿಲಾನ್ ನಡುವಣ ಪಂದ್ಯದಲ್ಲಿ ಅವರ ಮೊಣಕಾಲಿಗೆ ಪೆಟ್ಟಾಗಿತ್ತು.

* ಆರ್ಥರ್ ಮೆಲೊ (ಬ್ರೆಜಿಲ್)
ಮಿಡ್‌ಫೀಲ್ಡರ್ ಆಗಿರುವ ಆರ್ಥರ್ ಚಾಂಪಿಯನ್ಸ್ ಲೀಗ್‌ನಲ್ಲಿ ಆಡುವಾಗ ಮಾಂಸಖಂಡದ ಗಾಯದಿಂದ ಬಳಲಿದರು. ಅವರು ಲಿವರ್‌ಪೂಲ್‌ ತಂಡವನ್ನು ಪ್ರತಿನಿಧಿಸಿದ್ದರು.

* ಸ್ಕಾಟ್ ಕೆನಡಿ (ಕೆನಡಾ)
25 ವರ್ಷದ ಡಿಫೆಂಡರ್ ಕಳೆದ ಅಕ್ಟೋಬರ್‌ನಲ್ಲಿ ಭುಜದ ಗಾಯದಿಂದ ಬಳಲಿದ್ದರು. ಜರ್ಮನ್ ಸೆಕೆಂಡ್ ಡಿವಿಷನ್ ಟೂರ್ನಿಯಲ್ಲಿ ಆಡುವಾಗ ಗಾಯಗೊಂಡಿದ್ದರು.

* ಜೀಸಸ್ ಟ್ಯಾಕ್ಟಿಟೊ ಕೊರೊನಾ (ಮೆಕ್ಸಿಕೊ)
ಸೆವಿಯಾ ಕ್ಲಬ್‌ನ ವಿಂಗರ್ ಆಗಿರುವ ಜೀಸಸ್‌ಗೆ ಎಡಗಾಲಿನ ಹಿಮ್ಮಡಿಗೆ ಪೆಟ್ಟಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT