ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಿಫಾ ವಿಶ್ವಕಪ್‌: ಮೆಸ್ಸಿ ತಡೆಯಲು ಫ್ರಾನ್ಸ್‌ ಯೋಜನೆ

Last Updated 15 ಡಿಸೆಂಬರ್ 2022, 19:42 IST
ಅಕ್ಷರ ಗಾತ್ರ

ಅಲ್‌ ಖೊರ್‌, ಕತಾರ್‌ (ಎಎಫ್‌ಪಿ):‘ಫೈನಲ್‌ ಪಂದ್ಯದಲ್ಲಿ ಲಯೊನೆಲ್‌ ಮೆಸ್ಸಿ ಅವರನ್ನು ತಡೆಯಲು ತಕ್ಕ ಯೋಜನೆ ರೂಪಿಸಿ ಕಣಕ್ಕಿಳಿಯುವೆವು’ ಎಂದು ಫ್ರಾನ್ಸ್‌ ತಂಡದ ಕೋಚ್‌ ದಿದಿಯರ್‌ ದೆಶಾಂಪ್‌ ಹೇಳಿದ್ದಾರೆ.

‘ಮೆಸ್ಸಿ ಟೂರ್ನಿಯ ಆರಂಭದಿಂ ದಲೂ ಅತ್ಯುತ್ತಮ ಫಾರ್ಮ್‌ನಲ್ಲಿ ಆಡುತ್ತಿದ್ದಾರೆ. ಅವರು ವಿಶ್ವದ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. ಫೈನಲ್‌ನಲ್ಲಿ ಅವರು ಒಡ್ಡಲಿರುವ ಅಪಾಯವನ್ನು ತಡೆಯಲು ಪ್ರಯತ್ನಿಸಲಾಗುವುದು’ ಎಂದು ತಿಳಿಸಿದ್ದಾರೆ.

ರಷ್ಯಾದಲ್ಲಿ ನಾಲ್ಕು ವರ್ಷಗಳ ಹಿಂದೆ ನಡೆದಿದ್ದ ಟೂರ್ನಿಯ 16ರ ಘಟ್ಟದ ಪಂದ್ಯದಲ್ಲಿ ಫ್ರಾನ್ಸ್‌ 4–3 ರಲ್ಲಿ ಅರ್ಜೆಂಟೀನಾ ತಂಡವನ್ನು ಮಣಿಸಿತ್ತು. ಆ ಸೋಲಿಗೆ ಮುಯ್ಯಿ ತೀರಿಸಲು ಅರ್ಜೆಂಟೀನಾ ಪ್ರಯತ್ನಿಸಲಿದೆ.

‘ಫೈನಲ್‌ ಪ್ರವೇಶಿಸಲು ಸಾಧ್ಯವಾಗಿರುವುದಕ್ಕೆ ತಂಡದ ಅಟಗಾರರ ಬಗ್ಗೆ ಹೆಮ್ಮೆಯಿದೆ. ಸೆಮಿಫೈನಲ್‌ನಲ್ಲಿ ಗೆಲುವು ಸುಲಭದ್ದಾಗಿರಲಿಲ್ಲ’ ಎಂದು ದೆಶಾಂಪ್‌ ಹೇಳಿದ್ದಾರೆ.

‘ಉತ್ತಮ ಗುಣಮಟ್ಟದ ಆಟ, ಅನುಭವ ಮತ್ತು ಒಗ್ಗಟ್ಟಿನ ಹೋರಾಟ ನಮಗೆ ಅಗತ್ಯವಿತ್ತು. ಕಠಿಣ ಸಂದರ್ಭಗಳನ್ನು ನಮ್ಮ ಆಟಗಾರರು ಛಲದಿಂದ ಎದುರಿಸಿ ನಿಂತರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ಯಾರಿಸ್‌ನಲ್ಲಿ ಸಂಭ್ರಮ

ಪ್ಯಾರಿಸ್‌ (ರಾಯಿಟರ್ಸ್‌): ಸೆಮಿಫೈನಲ್‌ನಲ್ಲಿ ಫ್ರಾನ್ಸ್‌ ತಂಡ ಗೆಲುವು ಸಾಧಿಸುತ್ತಿದ್ದಂತೆಯೇ ಪ್ಯಾರಿಸ್‌ನಲ್ಲಿ ಸಾವಿರಾರು ಅಭಿಮಾನಿಗಳು ಸಂಭ್ರಮಿಸಿದರು.

ನಗರದ ಪ್ರಮುಖ ವೃತ್ತಗಳು ಮತ್ತು ರಸ್ತೆಗಳಲ್ಲಿ ಫುಟ್‌ಬಾಲ್‌ ಪ್ರೇಮಿಗಳು ಹಾಡು, ನೃತ್ಯದ ಮೂಲಕ ಸಂತಸಪಟ್ಟರು. ಯುವಕ‍–ಯುವತಿಯರು ವಾಹನಗಳಲ್ಲಿ ಹಾರ್ನ್ ಹಾಕುತ್ತಾ ಸಾಗಿದರು. ಪಟಾಕಿ ಸಿಡಿಸಿ ಸಂಭ್ರಮಪಟ್ಟರು. ನಗರದ ಹಲವೆಡೆ ದೊಡ್ಡ ಪರದೆಯಲ್ಲಿ ಪಂದ್ಯ ವೀಕ್ಷಿಸಲು ಸೌಲಭ್ಯ ಕಲ್ಪಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT