ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಜುನ ಪ್ರಶಸ್ತಿಗೆ ಗುರುಪ್ರೀತ್, ಜೆಜೆ ಹೆಸರು

Last Updated 27 ಏಪ್ರಿಲ್ 2019, 20:00 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ (ಎಐಎಫ್‌ಎಫ್‌) ಶನಿವಾರ ಗುರುಪ್ರೀತ್‌ ಸಿಂಗ್‌ ಸಂಧು ಮತ್ತು ಜೆಜೆ ಲಾಲ್‌ಪೆಕ್ಲುವಾ ಅವರ ಹೆಸರುಗಳನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿದೆ.

ಇವರ ಹೆಸರನ್ನು ಎಐಎಫ್‌ಎಫ್‌ ಮೂರನೇ ಸಲ ಶಿಫಾರಸು ಮಾಡಿದೆ. 2017 ಮತ್ತು 2018ರಲ್ಲೂ ಗುರುಪ್ರೀತ್‌ ಮತ್ತು ಜೆಜೆ ಅವರ ಹೆಸರುಗಳನ್ನು ಕಳುಹಿಸಲಾಗಿತ್ತು. ಆದರೆ ಅರ್ಜುನ ಪ್ರಶಸ್ತಿ ಆಯ್ಕೆ ಸಮಿತಿಯು ಪರಿಗಣನೆಗೆ ತೆಗೆದುಕೊಂಡಿರಲಿಲ್ಲ.

ಗೋಲ್‌ಕೀಪರ್‌ ಗುರುಪ್ರೀತ್‌ ಅವರು ಇಂಡಿಯನ್‌ ಸೂಪರ್‌ ಲೀಗ್‌ನಲ್ಲಿ (ಐಎಸ್‌ಎಲ್‌) ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ಪರ ಆಡುತ್ತಾರೆ. ಏಷ್ಯಾಕಪ್‌ನ ಅಂತಿಮ ಸುತ್ತಿನ ಪಂದ್ಯಗಳಲ್ಲಿ ಪಾಲ್ಗೊಂಡ ಭಾರತದ ಎರಡನೇ ಆಟಗಾರ ಎಂಬ ಹಿರಿಮೆ ಇವರದ್ದಾಗಿದೆ. 2011 ಮತ್ತು 2019ರಲ್ಲಿ ಗುರುಪ್ರೀತ್‌, ಫೈನಲ್ ಸುತ್ತಿನ ಪಂದ್ಯಗಳಲ್ಲಿ ಆಡಿದ್ದರು.

ಯುರೋಪ್‌ನ ಪ್ರತಿಷ್ಠಿತ ಲೀಗ್‌ವೊಂದರಲ್ಲಿ ಪಾಲ್ಗೊಂಡ ಭಾರತದ ಮೊದಲ ಆಟಗಾರ ಎಂಬ ಹಿರಿಮೆಯೂ ಗುರುಪ್ರೀತ್‌ ಅವರದ್ದಾಗಿದೆ. 2016ರಲ್ಲಿ ಅವರು ನಾರ್ವೆಯ ಸ್ಟಾಬೇಕ್‌ ಕ್ಲಬ್‌ ಪರ ಆಡಿದ್ದರು.

ಸ್ಟ್ರೈಕರ್‌ ಆಗಿರುವ ಜೆಜೆ, ಐಎಸ್‌ಎಲ್‌ನಲ್ಲಿ ಚೆನ್ನೈಯಿನ್‌ ಎಫ್‌ಸಿ ಪರ ಕಣಕ್ಕಿಳಿದಿದ್ದರು. 28 ವರ್ಷದ ಈ ಆಟಗಾರ 2011ರಲ್ಲಿ ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ಅಡಿ ಇಟ್ಟಿದ್ದರು. ಒಟ್ಟು 56 ಪಂದ್ಯಗಳನ್ನು ಆಡಿರುವ ಇವರು 23 ಗೋಲುಗಳನ್ನು ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT