ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Football: ಇಂಡಿಯನ್ ಸೂಪರ್ ಲೀಗ್ ಟೂರ್ನಿಗೆ ಬಿಎಫ್‌ಸಿ ತಂಡ ಪ್ರಕಟ

ಬೆಂಗಳೂರು ಎಫ್‌ಸಿಗೆ ಚೆಟ್ರಿ ಸಾರಥ್ಯ
Last Updated 14 ನವೆಂಬರ್ 2021, 15:31 IST
ಅಕ್ಷರ ಗಾತ್ರ

ಬೆಂಗಳೂರು: ಇಂಡಿಯನ್‌ ಸೂಪರ್‌ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಗೆ ಬೆಂಗಳೂರು ಫುಟ್‌ಬಾಲ್‌ ಕ್ಲಬ್ (ಬಿಎಫ್‌ಸಿ) ತಂಡವನ್ನು ಪ್ರಕಟಿಸಲಾಗಿದೆ. ಸತತ ಒಂಬತ್ತನೇ ಆವೃತ್ತಿಗೆ ಸುನಿಲ್ ಚೆಟ್ರಿ ಅವರು ತಂಡದ ನಾಯಕತ್ವ ವಹಿಸಲಿದ್ದಾರೆ.

ಜರ್ಮನ್–ಇಟಾಲಿಯನ್ ಕೋಚ್‌ ಮಾರ್ಕೊ ಪೆಜೌಲಿ ಮಾರ್ಗದರ್ಶನದಲ್ಲಿ ಪಳಗಿರುವ ತಂಡವು ಈ ಬಾರಿಯ ಟೂರ್ನಿಯ ಮೊದಲ ಪಂದ್ಯದಲ್ಲಿ ನಾರ್ತ್‌ಈಸ್ಟ್‌ ಯುನೈಟೆಡ್ ಎಫ್‌ಸಿ ಎದುರು ಆಡಲಿದೆ. ನವೆಂಬರ್ 20ರಂದು ಈ ಹಣಾಹಣಿ ನಿಗದಿಯಾಗಿದೆ.

ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ, ಬೆಂಗಳೂರಿನ ಶ್ರೀ ಗುರು ಹರಿಕೃಷ್ಣ ಶಾಲೆಯ ವಿದ್ಯಾರ್ಥಿಗಳ ಸಮ್ಮುಖದಲ್ಲಿ ತಂಡದ ಆಟಗಾರರ ಹೆಸರುಗಳನ್ನು ಪ್ರಕಟಿಸಿದ್ದು ಗಮನಸೆಳೆಯಿತು. ಈ ವಿಷಯವನ್ನು ಬೆಂಗಳೂರು ಎಫ್‌ಸಿಯು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದೆ.

ಕಳೆದ ಆವೃತ್ತಿಯಲ್ಲಿ ತಂಡದ ಕಾಯ್ದಿರಿಸಿದ ಆಟಗಾರರ ಪಟ್ಟಿಯಲ್ಲಿದ್ದ ಆಕಾಶದೀಪ್‌ ಸಿಂಗ್‌, ದಮೈಪಾಂಗ್‌ ಲಿಂಗ್ಡೊ ಮತ್ತು ಶಿವಶಕ್ತಿ ನಾರಾಯಣನ್‌ ಅವರು ಈ ಬಾರಿಯೂ ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

2021–22ರ ಆವೃತ್ತಿಯು ಬೆಂಗಳೂರು ಎಫ್‌ಸಿ ಆಡಲಿರುವ ಐದನೇ ಆವೃತ್ತಿಯಾಗಿದೆ. ಮೊದಲ ಎರಡು ಆವೃತ್ತಿಯಲ್ಲಿ ಫೈನಲ್ ತಲುಪಿದ್ದ ತಂಡವು 2018–19ರ ಆವೃತ್ತಿಯಲ್ಲಿ ಪ್ರಶಸ್ತಿ ಗೆದ್ದಿತ್ತು. 2019–20ರಲ್ಲಿ ಸೆಮಿಫೈನಲ್‌ವರೆಗೆ ತಲುಪಿತ್ತು.

ತಂಡ ಇಂತಿದೆ: ಗೋಲ್‌ಕೀಪರ್‌ಗಳು: ಗುರುಪ್ರೀತ್ ಸಿಂಗ್‌ ಸಂಧು, ಲಾರಾ ಶರ್ಮಾ, ಶರೋನ್‌ ಪಡತ್ತಿಲ್‌

ಡಿಫೆಂಡರ್ಸ್: ಪ್ರತೀಕ್ ಚೌಧರಿ, ವುಂಗಾಗಯಮ್‌ ಮೈರಾಂಗ್‌, ಅಜಿತ್ ಕುಮಾರ್‌, ಪರಾಗ್ ಶ್ರೀವಾಸ್‌, ಅಲನ್ ಕೋಸ್ಟಾ, ಸಾರ್ಥಕ್ ಗೋಲುಯಿ, ರೊಂದು ಮುಸಾವು ಕಿಂಗ್‌.

ಮಿಡ್‌ಫೀಲ್ಡರ್ಸ್: ಸುರೇಶ್‌ ವಾಂಗ್‌ಜಮ್‌, ಅಜಯ್ ಚೆಟ್ರಿ, ಆಶಿಕ್ ಕುರುಣಿಯನ್‌, ನಾಮಗ್ಯಾಲ್‌ ಭುಟಿಯಾ, ನೊರೆಮ್‌ ರೋಶನ್ ಸಿಂಗ್‌, ವಿಶ್ವ ದರ್ಜೀ, ದಮೈಪಾಂಗ್‌ ಲಿಂಗ್ಡೊ, ಆಕಾಶದೀಪ್ ಸಿಂಗ್, ರೋಹಿತ್ ಕುಮಾರ್‌, ಜಯೇಶ್ ರಾಣೆ, ಡ್ಯಾನಿಶ್ ಫಾರೂಕ್‌, ಬ್ರೂನೊ ರಾಮಿರೆಸ್‌, ಇಮಾನ್ ಬಸಾಫ.

ಫಾರ್ವರ್ಡ್ಸ್: ಸುನಿಲ್ ಚೆಟ್ರಿ, ಎಡ್ಮಂಡ್‌ ಲಾಲ್‌ರಿಂದಿಕಾ, ಉದಾಂತ್ ಸಿಂಗ್‌, ಕ್ಲೇಟನ್ ಸಿಲ್ವಾ, ಲಿಯೊನ್‌ ಅಗಸ್ಟಿನ್‌, ಶಿವಶಕ್ತಿ ನಾರಾಯಣನ್‌, ಪ್ರಿನ್ಸ್ ಇಬಾರ, ಹರ್ಮನ್‌ಪ್ರೀತ್ ಸಿಂಗ್‌, ವಿದ್ಯಾಸಾಗರ್ ಸಿಂಗ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT