ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಲ್‌ಕೀಪರ್‌ಗೆ ಗಾಯ

Last Updated 7 ನವೆಂಬರ್ 2018, 20:31 IST
ಅಕ್ಷರ ಗಾತ್ರ

ಬೆಂಗಳೂರು: ಬಿಡಿಎಫ್‌ಎ ಸೂಪರ್ ಡಿವಿಷನ್‌ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ‘ಬಿ’ ತಂಡದ ಗೋಲ್ ಕೀಪರ್‌ ಶೇನ್‌ ಖಾನ್ ಅವರಿಗೆ ಬುಧವಾರ ಗಂಭೀರ ಗಾಯವಾಗಿದೆ.

ಅಶೋಕನಗರದ ಬೆಂಗಳೂರು ಫುಟ್‌ಬಾಲ್‌ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ಬೆಂಗಳೂರು ಡ್ರೀಮ್‌ ಯುನೈಟೆಡ್‌ ಎಫ್‌ಸಿ ಎದುರಿನ ಪಂದ್ಯದ 58ನೇ ನಿಮಿಷದಲ್ಲಿ ಆದಿತ್ಯ ರಾಟೆಲಾ ಅವರ ಗೋಲು ಗಳಿಸುವ ಪ್ರಯತ್ನವನ್ನು ತಡೆಯುವ ಸಂದರ್ಭದಲ್ಲಿ ಶೇನ್‌ ಖಾನ್ ಗಾಯಗೊಂಡರು.

ಪಂದ್ಯವನ್ನು ತಕ್ಷಣ ಸ್ಥಗಿತಗೊಳಿಸಿ ತಂಡದ ವೈದ್ಯಕೀಯ ವಿಭಾಗದವರು, ಅವರನ್ನು ಪರೀಕ್ಷೆಗೆ ಒಳಪಡಿಸಿದರು. ನಂತರ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪಂದ್ಯವನ್ನು ಮುಂದು ವರಿಸಿದಾಗ ಹಿರಾಜಿತ್‌ ಸಿಂಗ್‌ ಗೋಪ್‌ ಕೀಪಿಂಗ್ ಮಾಡಿದರು.

‘ಶೇನ್‌ ಖಾನ್ ಅವರ ಬಲ ಕಿವಿಯ ಭಾಗದಲ್ಲಿ ಗಾಯವಾಗಿದೆ. ಇದರಿಂದ ರಕ್ತಸ್ರಾವವಾಗಿತ್ತು. ಚಿಕಿತ್ಸೆಯ ನಂತರ ಗುಣಮುಖರಾಗಿದ್ದಾರೆ’ ಎಂದು ತಂಡದ ಅಧಿಕಾರಿಗಳು ತಿಳಿಸಿದ್ದಾರೆ.

ಬಿಎಫ್‌ಸಿ ‘ಬಿ’ಗೆ ಜಯ: ಪಂದ್ಯದಲ್ಲಿ ಬಿಎಫ್‌ಸಿ ‘ಬಿ’ ತಂಡ 2–0ಯಿಂದ ಗೆದ್ದಿತು. 14ನೇ ನಿಮಿಷದಲ್ಲಿ ಜಿತಿನ್‌ ಮತ್ತು ಲಾಲ್‌ನುಂಗ್ಟುವಾಂಗ 88ನೇ ನಿಮಿಷದಲ್ಲಿ ಗೋಲು ಗಳಿಸಿದರು.

‘ಎ’ ಡಿವಿಷನ್ ಪಂದ್ಯದಲ್ಲಿ ಬೆಂಗ ಳೂರು ಯುನೈಟೆಡ್ ಎಫ್‌ಸಿ ತಂಡ 3–1ರಿಂದ ಆರ್‌.ಎಸ್‌.ಸ್ಪೋರ್ಟ್ಸ್‌ ವಿರುದ್ಧ ಗೆದ್ದಿತು. ಯುನೈಟೆಡ್ ಪರ ಚಿನುಡು (ಏಳು ಮತ್ತು 16ನೇ ನಿಮಿಷ) ಹಾಗೂ ಕೀತಾ (77ನೇ ನಿ) ಗೋಲು ಗಳಿಸಿದರೆ ಆರ್‌.ಎಸ್‌ಗೆ ಸೂರ್ಯ (53ನೇ ನಿ) ಗೋಲು ತಂದಿತ್ತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT