ಬುಧವಾರ, ಏಪ್ರಿಲ್ 8, 2020
19 °C
ಕೊರೊನಾ ಸೋಂಕು ತಡೆಗಟ್ಟಲು ಕೈಜೋಡಿಸಿದ ಬ್ರೆಜಿಲ್‌ನ ಪ್ರಮುಖ ಕ್ಲಬ್‌ಗಳು

ಫುಟ್‌ಬಾಲ್‌ ಮೈದಾನಗಳು ಆರೋಗ್ಯ ಕೇಂದ್ರಗಳು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾವೊ ಪಾಲೊ, ಬ್ರೆಜಿಲ್‌ (ಎಎಫ್‌ಪಿ): ಕೊರೊನಾ ಸೋಂಕಿನ ವಿರುದ್ಧ ಬ್ರೆಜಿಲ್‌ ಸರ್ಕಾರ ನಡೆಸುತ್ತಿರುವ ಹೋರಾಟಕ್ಕೆ ಅಲ್ಲಿನ ಪ್ರಮುಖ ಫುಟ್‌ಬಾಲ್‌ ಕ್ಲಬ್‌ಗಳು ಕೈಜೋಡಿಸಿವೆ.

ಕೋವಿಡ್‌–19 ಪೀಡಿತರ ಚಿಕಿತ್ಸೆಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ರಿಯೊ ಡಿ ಜನೈರೊ ಹಾಗೂ ಸಾವೊ ಪಾಲೊದ ಪ್ರಮುಖ ಕ್ಲಬ್‌ಗಳು ತಮ್ಮ ಒಡೆತನದ ಮೈದಾನಗಳನ್ನು ಆಸ್ಪತ್ರೆ ಹಾಗೂ ಚಿಕಿತ್ಸಾ ಕೇಂದ್ರಗಳನ್ನಾಗಿ ಪರಿವರ್ತಿಸಲು ಮುಂದಾಗಿವೆ.

ರಿಯೊ ಡಿ ಜನೈರೊದ ಫ್ಲೆಮಿಂಗೊ ಕ್ಲಬ್‌ ತನ್ನ ಒಡೆತನದ ಪ್ರತಿಷ್ಠಿತ ಮರಕಾನ ಕ್ರೀಡಾಂಗಣವನ್ನು ಆರೋಗ್ಯ ಇಲಾಖೆಗೆ ಒಪ್ಪಿಸಿದೆ. ಈ ಮೈದಾನ 78,838 ಆಸನ ಸಾಮರ್ಥ್ಯ ಹೊಂದಿದೆ.

‘ಕೊರೊನಾ ಪೀಡಿತರಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಗಳಲ್ಲಿ ಜಾಗವೇ ಇಲ್ಲದಂತಾಗಿದೆ. ಇಂತಹ ಸಂದಿಗ್ಧ ಸಮಯದಲ್ಲಿ ನಾವೆಲ್ಲಾ ಆರೋಗ್ಯ ಇಲಾಖೆಯ ಜೊತೆ ಕೈಜೋಡಿಸುವುದು ಅಗತ್ಯ. ಮಾನವೀಯತೆಯ ದೃಷ್ಟಿಯಿಂದ ನಾನು ಮರಕಾನ ಕ್ರೀಡಾಂಗಣವನ್ನು ಆಸ್ಪತ್ರೆಯನ್ನಾಗಿ ಪರಿವರ್ತಿಸಲು ಅವಕಾಶ ನೀಡಿದ್ದೇನೆ’ ಎಂದು ಕ್ಲಬ್‌ನ ಅಧ್ಯಕ್ಷ ರುಡಾಲ್ಫೊ ಲಾಂಡಿಮ್‌ ತಿಳಿಸಿದ್ದಾರೆ.

ಶತಮಾನದ ಇತಿಹಾಸವಿರುವ ಫ್ಲೆಮಿಂಗೊ ಕ್ಲಬ್‌, ದೇಶಿ ಲೀಗ್‌ಗಳಲ್ಲಿ ಅನೇಕ ಪ್ರಶಸ್ತಿಗಳನ್ನು ಜಯಿಸಿದೆ. 

ಸಾವೊ ಪಾಲೊದ ಪಕೆಂಬು ಮುನ್ಸಿಪಲ್‌ ಕ್ರೀಡಾಂಗಣದಲ್ಲಿ 200 ಹಾಸಿಗೆ ಸಾಮರ್ಥ್ಯದ ಫೀಲ್ಡ್‌ ಆಸ್ಪತ್ರೆ ನಿರ್ಮಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಕೊರಿಂಥಿಯನ್ಸ್‌ ಎಫ್‌ಸಿ ತಂಡವು ತಾನಾಡುವ ಇಟಾಕ್ವೆರವೊ ಕ್ರೀಡಾಂಗಣವನ್ನು ಆರೋಗ್ಯ ಇಲಾಖೆಗೆ ಬಿಟ್ಟುಕೊಡಲು ತಯಾರಾಗಿರುವುದಾಗಿ ಹೇಳಿದೆ. ಸ್ಯಾಂಟೋಸ್‌ ಕ್ಲಬ್‌ ಕೂಡ ತನ್ನ ಒಡೆತನದ ವಿಲಾ ಬೆಲ್ಮಿರೊ ಮೈದಾನದಲ್ಲಿ ತಾತ್ಕಾಲಿಕ ಕ್ಲಿನಿಕ್‌ಗಳನ್ನು ನಿರ್ಮಿಸಿಕೊಳ್ಳಲು ಆರೋಗ್ಯ ಇಲಾಖೆಗೆ ಅನುಮತಿ ನೀಡಿದೆ.

ಬ್ರೆಜಿಲ್‌ನಲ್ಲಿ ಕೊರೊನಾ ಪೀಡಿತರ ಸಂಖ್ಯೆ 1,128ಕ್ಕೇರಿದೆ. 18 ಮಂದಿ ಕೋವಿಡ್‌ನಿಂದ ಸಾವನ್ನಪ್ಪಿದ್ದಾರೆ.

ಮರಕಾನ ಕ್ರೀಡಾಂಗಣ

ಆರೋಗ್ಯ ಇಲಾಖೆಗೆ

ಬ್ರೆಜಿಲ್‌ನಲ್ಲಿ ಕೊರೊನಾ ಪೀಡಿತರ ಸಂಖ್ಯೆ 1,128ಕ್ಕೆ

200 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು