ರ‍್ಯಾಲಿ: ಅಜ್ಗರ್‌ ಅಲಿ ಮೊಹಮ್ಮದ್‌ ಹ್ಯಾಟ್ರಿಕ್‌

ಮಂಗಳವಾರ, ಏಪ್ರಿಲ್ 23, 2019
31 °C

ರ‍್ಯಾಲಿ: ಅಜ್ಗರ್‌ ಅಲಿ ಮೊಹಮ್ಮದ್‌ ಹ್ಯಾಟ್ರಿಕ್‌

Published:
Updated:

ಸಿಲಿಗುರಿ: ಪಶ್ಚಿಮ ಬಂಗಾಳದ ಅಜ್ಗರ್ ಅಲಿ ಮತ್ತು ತಮಿಳುನಾಡಿನ ಮೊಹಮ್ಮದ್‌ ಮುಸ್ತಫಾ ಜೋಡಿ ಇಲ್ಲಿ ನಡೆದ ಜೆಕೆ ಟೈರ್ಸ್‌ ಹಿಮಾಲಯನ್ ಡ್ರೈವ್–7 ರ‍್ಯಾಲಿಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

ನಾಲ್ಕು ದಿನ ನಡೆದ ದುರ್ಗಮ ರ‍್ಯಾಲಿಯಲ್ಲಿ ಅಮೋಘ ಪ್ರದರ್ಶನ ನೀಡಿದ ಹಲ್ದಿಯಾ ಪಟ್ಟಣದ ಅಜ್ಗರ್ ಮತ್ತು ಈರೋಡ್‌ನ ಮೊಹಮ್ಮದ್‌ ಗಮನ ಸೆಳೆದರು. ಈ ಮೂಲಕ ಸತತ ಮೂರನೇ ಬಾರಿ ಪ್ರಶಸ್ತಿ ತಮ್ಮದಾಗಿಸಿಕೊಂಡರು. 1110 ಪೆನಾಲ್ಟಿ ಪಾಯಿಂಟ್‌ಗಳೊಂದಿಗೆ ಈ ಜೋಡಿ ವಿನೂತನ ಸಾಧನೆ ಮಾಡಿತು. ಇದು ದೇಶದ ಏಕೈಕ ಟೈಮ್‌, ಸ್ಪೀಡ್ ಮತ್ತು ಡಿಸ್ಟೆನ್ಸ್ ರ‍್ಯಾಲಿಯಾಗಿದೆ.

1847 ಪೆನಾಲ್ಟಿ ಪಾಯಿಂಟ್ಸ್ ಕಲೆ ಹಾಕಿದ ಗಗನ್ ಸೇಥಿ ಮತ್ತು ರಾಜಕುಮಾರ್ ಮುಂಡ್ರಾ ಎರಡನೇ ಸ್ಥಾನ ಗಳಿಸಿದರೆ ಜೋಗೇಂದ್ರ ಜೈಸ್ವಾಲ್‌ ಮತ್ತು ನಾಗರಾಜನ್ ತಂಗರಾಜ್‌ ಮೂರನೇ ಸ್ಥಾನ ಗೆದ್ದರು. ಅವರು 2035 ಪೆನಾಲ್ಟಿ ಪಾಯಿಂಟ್ ಗಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !