ಬುಧವಾರ, ಜನವರಿ 22, 2020
23 °C

ಪೆಲೆ ಪೋಷಾಕಿಗೆ 23.70 ಲಕ್ಷ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಮಿಲಾನ್: ಫುಟ್‌ಬಾಲ್ ದಿಗ್ಗಜ ಪೆಲೆ ಅವರು ತಮ್ಮ ತವರು ಬ್ರೆಜಿಲ್ ದೇಶದ ಪರ ಆಡಿದ್ದ ಕೊನೆಯ ಪಂದ್ಯದಲ್ಲಿ ಧರಿಸಿದ್ದ ಪೋಷಾಕು (ಜರ್ಸಿ) ಇಟಲಿಯಲ್ಲಿ ಬಂಪರ್ ಬೆಲೆಗೆ ಮಾರಾಟವಾಗಿದೆ.

ಮೂರು ಬಾರಿ ಫಿಫಾ ವಿಶ್ವಕಪ್ ಗೆದ್ದ ಹೆಗ್ಗಳಿಕೆಯ ಪೆಲೆ ಅವರ ಜರ್ಸಿಯು ₹23.70 ಲಕ್ಷಕ್ಕೆ ಮಾರಾಟವಾಗಿದೆ.  ಅವರು ಕೊನೆಯ ಬಾರಿ ಕಣಕ್ಕಿಳಿದಿದ್ದ ಯುಗೊಸ್ಲೊವಿಯಾ ಎದುರಿನ ಸ್ನೇಹಪರ ಪಂದ್ಯದಲ್ಲಿ. ಆ ಪಂದ್ಯವು 1971ರಲ್ಲಿ ರಿಯೊ ಡಿ ಜನೈರೊದಲ್ಲಿ ನಡೆದಿತ್ತು. ಅದರಲ್ಲಿ ಅವರು ಧರಿಸಿದ್ದ ಹಳದಿ ಬಣ್ಣದ ಪೊಷಾಕಿಗೆ ಗುರುವಾರ ಇಟಲಿಯಲ್ಲಿ ಶುಕ್ರದೆಸೆ ಒಲಿಯಿತು. ವಿವಿಧ ಕ್ರೀಡೆಗಳ ದಿಗ್ಗಜರ ಪೋಷಾಕುಗಳ ಹರಾಜಿನಲ್ಲಿ ಪೆಲೆ ಅವರ ಜೆರ್ಸಿಗೆ ಹೆಚ್ಚು ಬೆಲೆ ಲಭಿಸಿತು. 

1952ರಲ್ಲಿ ಟೂರ್ ಡಿ ಫ್ರಾನ್ಸ್‌ ಸ್ಪರ್ಧೆಯಲ್ಲಿ ಮಿಂಚಿದ್ದ ಇಟಲಿಯ ಸೈಕ್ಲಿಸ್ಟ್ ಫಾಸ್ಟೊ ಕಾಪಿ ಅವರ ಜೆರ್ಸಿಯು ₹ 19.75 ಲಕ್ಷಕ್ಕೆ ಮಾರಾಟವಾಯಿತು. 1971ರಲ್ಲಿ ಯುರೋಪಿಯನ್ ಲೀಗ್ ಕಪ್‌ ಟೂರ್ನಿಯಲ್ಲಿ ಯುವೆಂಟಸ್ ಪರ  ಡಿಫೆಂಡರ್ ಲುಸಿಯಾನೊ ಸ್ಪಿನೊಸಿ ಧರಿಸಿದ್ದ ಜೆರ್ಸಿಗೆ ₹7.42 ಲಕ್ಷ; 1989–90ರಲ್ಲಿ ಅರ್ಜೆಂಟಿನಾದ ಡಿಗೊ ಮರಡೋನಾ ಅವರು ನೆಪೋಲಿಗೆ ಆಡಿದ್ದ ಸಂದರ್ಭದಲ್ಲಿ ಧರಿಸಿದ್ದ ₹ 5.92 ಲಕ್ಷಕ್ಕೆ ಮಾರಾಟವಾದವು.

ಬ್ಯಾಸ್ಕೆಟ್‌ಬಾಲ್ ದಿಗ್ಗಜ ಮೈಕೆಲ್ ಜೋರ್ಡಾನ್ ಅವರು ಕೆಲವು ಕಾಲ ಬೇಸ್‌ಬಾಲ್ ಆಡಿದ್ದರು. ಆಗ ಅವರು ಬಳಸಿದ್ದ ಬ್ಯಾಟ್‌ ₹ 34 ಸಾವಿರಕ್ಕೆ ಬಿಕರಿಯಾಯಿತು.

ಸಾರ್ವಕಾಲಿಕ ಶ್ರೇಷ್ಠ ಫುಟ್‌ಬಾಲ್ ಆಟಗಾರನೆಂಬ ಹೆಗ್ಗಳಿಕೆ ಪೆಲೆ ಅವರದ್ದು. ಬ್ರೆಜಿಲ್ ತಂಡದಲ್ಲಿ ಅವರು 92 ಪಂದ್ಯಗಳನ್ನು ಆಡಿದ್ದರು. ಅದರಲ್ಲಿ 77 ಗೋಲುಗಳನ್ನು ಗಳಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು