ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಯನ್ ಫುಟ್‌ಬಾಲ್ ಆಟಗಾರ ಜುಲ್ಫೀಕರುದ್ದೀನ್ ನಿಧನ

Last Updated 13 ಜನವರಿ 2019, 17:01 IST
ಅಕ್ಷರ ಗಾತ್ರ

ಹೈದರಾಬಾದ್: ಮೆಲ್ಬರ್ನ್‌ನಲ್ಲಿ 1956ರಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದ ಭಾರತ ಫುಟ್‌ಬಾಲ್ ತಂಡದ ಆಟಗಾರ ಮೊಹಮ್ಮದ್ ಜುಲ್ಫೀಕರುದ್ದೀನ್ (83)ಭಾನುವಾರ ನಿಧನರಾದರು.

ಅವರಿಗೆ ಮೂವರು ಪುತ್ರರು ಮತ್ತು ಇಬ್ಬರು ಪುತ್ರಿಯರು ಇದ್ದಾರೆ.

ಒಲಿಂಪಿಕ್ಸ್‌ನಲ್ಲಿ ಭಾರತ ತಂಡವು ನಾಲ್ಕನೇ ಸ್ಥಾನ ಪಡೆದಿತ್ತು. ಕಂಚಿನ ಪದಕದ ಸುತ್ತಿನ ಪಂದ್ಯದಲ್ಲಿ ಭಾರತ ತಂಡವು 0–3ರಿಂದ ಬಲ್ಗೇರಿಯಾ ಎದುರು ಸೋತಿತ್ತು. ಭಾರತ ಫುಟ್‌ಬಾಲ್‌ ತಂಡವು ಮಾಡಿದ ಶ್ರೇಷ್ಠ ಸಾಧನೆ ಅದಾಗಿತ್ತು.

1958ರಲ್ಲಿ ಟೊಕಿಯೊ ಏಷ್ಯನ್ ಗೇಮ್ಸ್‌, ಮಲೇಷ್ಯಾದಲ್ಲಿ ನಡೆದಿದ್ದ ಮರ್ಡೇಕಾ ಕಪ್ ಟೂರ್ನಿ, 1955 ರಿಂದ 1967ರವರೆಗೆ ಸಂತೋಷ್ ಟ್ರೋಫಿ ಟೂರ್ನಿಗಳಲ್ಲಿ ಅವರು ಆಡಿದ್ದರು. 1954 ರಿಂದ 12 ವರ್ಷಗಳ ಕಾಲ ಆಂಧ್ರಪ್ರದೇಶ ಪೊಲೀಸ್ ತಂಡದ ನಾಯಕರಾಗಿದ್ದರು. ಅವರ ತಂಡವು ಐಎಫ್‌ಎ ಶೀಲ್ಡ್‌, ಡುರಾಂಡ್ ಕಪ್ ಮತ್ತು ರೋವರ್ಸ್‌ ಕಪ್ ಟೂರ್ನಿಗಳಲ್ಲಿ ಚಾಂಪಿಯನ್ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT