ಗುರುವಾರ , ನವೆಂಬರ್ 21, 2019
26 °C

ಫುಟ್‌ಬಾಲ್‌: ಬ್ಯಾಲನ್‌ ಡಿ ಓರ್‌ ಪ್ರಶಸ್ತಿ ಸ್ಪರ್ಧೆಯಲ್ಲಿ ಮೆಸ್ಸಿ, ರೊನಾಲ್ಡೊ

Published:
Updated:

ಪ್ಯಾರಿಸ್‌:  ಪ್ರತಿಷ್ಠಿತ 2019ರ ಬ್ಯಾಲನ್‌ ಡಿ’ ಓರ್‌ ಫುಟ್‌ಬಾಲ್‌ ಪ್ರಶಸ್ತಿಗೆ ಲಯೊನೆಲ್‌ ಮೆಸ್ಸಿ, ಕ್ರಿಸ್ಟಿಯಾನೊ ರೊನಾಲ್ಡೊ ಹಾಗೂ ವರ್ಜಿಲ್‌ ವ್ಯಾನ್‌ ಡಿಕ್‌  ಪ್ರಮುಖ ಸ್ಪರ್ಧಿಗಳಾಗಿದ್ದಾರೆ. ಬ್ರೆಜಿಲ್‌ ತಾರೆ ನೇಮರ್‌ ಹೊರಗುಳಿದಿದ್ದಾರೆ.

ಸೋಮವಾರ 30 ಸ್ಪರ್ಧಿಗಳ ಹೆಸರನ್ನು ಘೋಷಿಸಲಾಯಿತು. ವರ್ಷದ ಶ್ರೇಷ್ಠ ಫುಟ್‌ಬಾಲ್‌ ಆಟಗಾರನಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.

ಫ್ರಾನ್ಸ್‌ ಫುಟ್‌ಬಾಲ್‌ ನಿಯತಕಾಲಿಕೆ ನೀಡುವ ಈ ಪ್ರಶಸ್ತಿ ಮೇಲೆ ಅರ್ಜೆಂಟೀನಾ ಆಟಗಾರ ಮೆಸ್ಸಿ ಹಾಗೂ ಪೋರ್ಚುಗಲ್‌ ಪರ ಆಡುವ ರೊನಾಲ್ಡೊ ದಶಕಗಳಿಂದ ಹಿಡಿತ ಸಾಧಿಸಿದ್ದರು. ಹೋದ ವರ್ಷದ ಡಿಸೆಂಬರ್‌ನಲ್ಲಿ ಕ್ರೊವೇಷ್ಯಾದ ಲೂಕಾ ಮಾಡ್ರಿಕ್‌ ಇವರಿಬ್ಬರ ಅಧಿಪತ್ಯವನ್ನು ಕೊನೆಗಾಣಿಸಿ ಪ್ರಶಸ್ತಿಗೆ ಮುತ್ತಿಕ್ಕಿದ್ದರು. 2018ರಲ್ಲಿ ರಿಯಲ್ ಮ್ಯಾಡ್ರಿಡ್‌ ಹಾಗೂ ರಾಷ್ಟ್ರೀಯ ತಂಡ ಕ್ರೊವೇಷ್ಯಾ ಪರ ಅವರ ಕಾಲ್ಚಳಕ ಗಮನಸೆಳೆದಿತ್ತು. ಆದರೆ ಈ ಬಾರಿ ಮಾಡ್ರಿಕ್‌ ಹೆಸರು ನಾಮನಿರ್ದೇಶನಗೊಂಡವರ ಪಟ್ಟಿಯಲ್ಲಿ ಇಲ್ಲ.

ನೆದರ್ಲೆಂಡ್ಸ್ ರಾಷ್ಟ್ರೀಯ ತಂಡ ಹಾಗೂ ಲಿವರ್‌ಪೂಲ್‌ ಕ್ಲಬ್‌ ಪರ ಆಡುವ ವರ್ಜಿಲ್‌ ವ್ಯಾನ್‌ ಡಿಕ್‌, ಪ್ರಶಸ್ತಿಗೆ ಸ್ಪರ್ಧೆಯಲ್ಲಿರುವ ಇನ್ನೊಂದು ಪ್ರಮುಖ ಹೆಸರು. ವಿಶ್ವದ ಶ್ರೇಷ್ಠ ಡಿಫೆಂಡರ್‌ಗಲ್ಲಿ ಒಬ್ಬರೆಂದು ಹೆಸರಾದವರು. 

ಪ್ರತಿಕ್ರಿಯಿಸಿ (+)