ಶನಿವಾರ, ಆಗಸ್ಟ್ 8, 2020
23 °C
ಭಾರತದ ಪರ ಗರಿಷ್ಠ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ ಸಾಧನೆ

ಗರಿಷ್ಠ ಪಂದ್ಯ ಆಡಿದ ಸುನಿಲ್‌ ಚೆಟ್ರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬುರಿರಾಮ್‌ (ಪಿಟಿಐ): ಭಾರತದ ಅನುಭವಿ ಫುಟ್‌ಬಾಲ್‌ ಆಟಗಾರ ಸುನಿಲ್‌ ಚೆಟ್ರಿ ಬುಧವಾರ ಮಹತ್ವದ ಮೈಲುಗಲ್ಲು ಸ್ಥಾಪಿಸಿದರು. ಭಾರತದ ಪರ ಅತ್ಯಧಿಕ ಅಂತರರಾಷ್ಟ್ರೀಯ ಪಂದ್ಯಗಳನ್ನು(108) ಆಡಿದ ಕೀರ್ತಿ ಅವರ ಪಾಲಾಯಿತು. ಆದರೆ ಕ್ಯುರಸೊವ್‌ ತಂಡದ ವಿರುದ್ಧ ಇಲ್ಲಿ ನಡೆದ ಕಿಂಗ್ಸ್‌ ಕಪ್‌ ಟೂರ್ನಿಯಲ್ಲಿ ಭಾರತ 1–3 ರಿಂದ ಸೋತಿತು. ಚೆಟ್ರಿ ಅವರು ಭಾರತದ ಪರ 31ನೇ ನಿಮಿಷದಲ್ಲಿ ಏಕೈಕ ಗೋಲು ಹೊಡೆದರು. ಇದು ಅವರು ಹೊಡೆದ ಒಟ್ಟು 68ನೇ ಗೋಲು.

ಭಾರತದ ಪರ ಈ ಹಿಂದೆ ಬೈಚುಂಗ್‌ ಭುಟಿಯಾ ಅತ್ಯಧಿಕ ಪಂದ್ಯಗಳನ್ನು ಆಡಿದ ಸಾಧನೆಗೆ ಭಾಜನರಾಗಿದ್ದರು. ಅವರು 107  ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ. ಪಂದ್ಯದಲ್ಲಿ ಕ್ಯುರಸೊವ್‌ ಪರ ರೋಲಿ ಬೋನೆವೆಸಿಯಾ(16ನೇ ನಿಮಿಷ), ಎಲ್ಸನ್‌ ಹೂಯ್‌ (18ನೇ ನಿಮಿಷ) ಹಾಗೂ ಲಿಯಾಂಡ್ರೊ ಬಾಕುನಾ (33ನೇ ನಿಮಿಷ) ಗೋಲು ಹೊಡೆದರು.

ಭಾರತ ತನ್ನ ಮುಂದಿನ ಪಂದ್ಯದಲ್ಲಿ,  ಥಾಯ್ಲೆಂಡ್‌ ಹಾಗೂ ವಿಯೆಟ್ನಾಂ ಮಧ್ಯೆ ನಡೆಯುವ ಪಂದ್ಯದಲ್ಲಿ ಸೋತ ತಂಡವನ್ನು ಎದುರಿಸಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು