ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್‌: ಫೈನಲ್‌ನಲ್ಲಿ ಎಡವಿದ ಬಿಎಫ್‌ಸಿ

ಒಡಿಶಾ ಎಫ್‌ಸಿಗೆ ಸೂಪರ್‌ ಕಪ್‌ ಗರಿ
Published 26 ಏಪ್ರಿಲ್ 2023, 6:57 IST
Last Updated 26 ಏಪ್ರಿಲ್ 2023, 6:57 IST
ಅಕ್ಷರ ಗಾತ್ರ

ಕೋಯಿಕ್ಕೋಡ್‌: ಬೆಂಗಳೂರು ಎಫ್‌ಸಿ ತಂಡದವರು ಸೂಪರ್‌ ಕಪ್‌ ಫುಟ್‌ಬಾಲ್‌ ಟೂರ್ನಿಯ ಫೈನಲ್‌ನಲ್ಲಿ ಎಡವಿ ‘ರನ್ನರ್ಸ್‌ ಅಪ್‌’ ಆದರು.

ಇಲ್ಲಿನ ಇಎಂಎಸ್‌ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪ್ರಶಸ್ತಿ ಸುತ್ತಿನ ಹಣಾಹಣಿಯನ್ನು 2–1 ರಲ್ಲಿ ಜಯಿಸಿದ ಒಡಿಶಾ ಎಫ್‌ಸಿ ತಂಡ ಕಿರೀಟ ಮುಡಿಗೇರಿಸಿಕೊಂಡಿತು.

ಒಡಿಶಾ ತಂಡದ ಎರಡೂ ಗೋಲುಗಳನ್ನು ಗಳಿಸಿದ ಡೀಗೊ ಮೌರಿಸಿಯೊ ಅವರು ಗೆಲುವಿನ ರೂವಾರಿ ಆದರು. ಬಿಎಫ್‌ಸಿ ತಂಡದ ಏಕೈಕ ಗೋಲನ್ನು ಸುನಿಲ್‌ ಚೆಟ್ರಿ ಅವರು 89ನೇ ನಿಮಿಷದಲ್ಲಿ ಪೆನಾಲ್ಟಿ ಕಿಕ್‌ ಅವಕಾಶದಲ್ಲಿ ಗಳಿಸಿದರು.

ಬಿಎಫ್‌ಸಿ ತಂಡ ಈಚೆಗೆ ನಡೆದ ಐಎಸ್‌ಎಲ್‌ ಟೂರ್ನಿಯ ಫೈನಲ್‌ನಲ್ಲಿ ನಿರಾಸೆ ಅನುಭವಿಸಿತ್ತು. ಇದೀಗ ಸೂಪರ್‌ ಕಪ್‌ನಲ್ಲೂ ಅಂತಿಮ ತಡೆ ದಾಟುವಲ್ಲಿ ವಿಫಲವಾಯಿತು.

ಬ್ರೆಜಿಲ್‌ನ ಆಟಗಾರ ಮೌರಿಸಿಯೊ 23ನೇ ನಿಮಿಷದಲ್ಲಿ ಒಡಿಶಾ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಅವರು ಫ್ರೀಕಿಕ್‌ನಲ್ಲಿ ಒದ್ದ ಚೆಂಡನ್ನು ಬಿಎಫ್‌ಸಿ ಗೋಲ್‌ಕೀಪರ್‌ ಗುರುಪ್ರೀತ್‌ ಸಿಂಗ್‌ ಹಿಡಿತಕ್ಕೆ ಪಡೆಯಲು ವಿಫಲರಾದರು. ಅವರ ಕೈಜಾರಿದ ಚೆಂಡು ಗೋಲು ಲೈನ್‌ ದಾಟಿತು.

ಮತ್ತೆ ಕಾಲ್ಚಳಕ ಮೆರೆದ ಮೌರಿಸಿಯೊ 38ನೇ ನಿಮಿಷದಲ್ಲಿ ಮುನ್ನಡೆಯನ್ನು 2–0ಗೆ ಹೆಚ್ಚಿಸಿದರು. ಮೊದಲ ಅವಧಿಯ ಆಟದಲ್ಲಿ ಒಡಿಶಾ ತಂಡ ಪೂರ್ಣ ಪ್ರಾಬಲ್ಯ ಮೆರೆಯಿತು.

ಎರಡನೇ ಅವಧಿಯಲ್ಲಿ ಬಿಎಫ್‌ಸಿ ಆಕ್ರಮಣಕಾರಿ ಆಟವಾಡಿತಾದರೂ, ಬೇಗನೇ ಯಶಸ್ಸು ದೊರೆಯಲಿಲ್ಲ. 89ನೇ ನಿಮಿಷದಲ್ಲಿ ಚೆಟ್ರಿ ಗೋಲು ಗಳಿಸಿ ಸೋಲಿನ ಅಂತರ ತಗ್ಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT