ಬೆಂಗಳೂರು: ‘ದಿ ಫ್ರೀಡಂ ಪ್ರಾಜೆಕ್ಟ್’ ತಂಡದವರು ಸೌತ್ ಯುನೈಟೆಡ್ ಫುಟ್‌ಬಾಲ್ ಕ್ಲಬ್ ವತಿಯಿಂದ ಆಯೋಜಿಸಿದ್ದ ‘ಕಿಕ್ ಫಾರ್ ಎ ಕಾಸ್ ವಿದ್ ಎಸ್‌ಯುಎಫ್‌ಸಿ’ ಫುಟ್‌ಬಾಲ್ ಟೂರ್ನಿಯಲ್ಲಿ 13 ವರ್ಷ ಮತ್ತು 15 ವರ್ಷದೊಳಗಿನವರ ವಿಭಾಗಗಳಲ್ಲಿ ಚಾಂಪಿಯನ್ ಆದರು.
13 ವರ್ಷದೊಳಗಿನ ವಿಭಾಗದ ಫೈನಲ್‌ನಲ್ಲಿ ಫ್ರೀಡಂ ಪ್ರಾಜೆಕ್ಟ್ ‘ಬಿ’ ತಂಡ 2–0 ಗೋಲುಗಳಿಂದ ಫ್ರೀಡಂ ಪ್ರಾಜೆಕ್ಟ್ ‘ಎ’ ತಂಡವನ್ನು ಮಣಿಸಿತು. 15 ವರ್ಷದೊಳಗಿನವರ ವಿಭಾಗದ ಫೈನಲ್‌ನಲ್ಲಿ ಫ್ರೀಡಂ ಪ್ರಾಜೆಕ್ಟ್ ‘ಎ’ ತಂಡ 6–0 ಗೋಲುಗಳಿಂದ ‘ಬಾಲ್ ಫಾರ್ ಆಲ್’ ತಂಡವನ್ನು ಸೋಲಿಸಿತು.
ಅವಕಾಶವಂಚಿತ ಮಕ್ಕಳಿಗೆ ಪ್ರತಿಭೆ ತೋರಿಸಲು ವೇದಿಕೆಯೊದಗಿಸುವ ನಿಟ್ಟಿನಲ್ಲಿ ಏರ್ಪಡಿಸಿದ್ದ ಈ ಟೂರ್ನಿಯಲ್ಲಿ ನಗರದ 7 ಎನ್‌ಜಿಒಗಳ 153 ಮಕ್ಕಳು ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.