ಶನಿವಾರ, ಏಪ್ರಿಲ್ 4, 2020
19 °C

ಫುಟ್‌ಬಾಲ್ ಆಟಗಾರ ಅಶೋಕ್ ಚಟರ್ಜಿ ನಿಧನ

ಪಿಟಿಐ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ಹಿರಿಯ ಫುಟ್‌ಬಾಲ್ ಆಟಗಾರ ಅಶೋಕ್ ಚಟರ್ಜಿ (78) ಶನಿವಾರ ನಿಧನರಾದರು. ಅವರು ಪತ್ನಿ ಮತ್ತು ಪುತ್ರ, ಸಂಗೀತಗಾರ ಸಂದೀಪ್ ಅವರನ್ನು ಅಗಲಿದ್ದಾರೆ.

ಭಾರತದ ಪರವಾಗಿ 30 ಪಂದ್ಯಗಳನ್ನು ಆಡಿದ್ದ ಅಶೋಕ್ 10 ಗೋಲುಗಳನ್ನು ಹೊಡೆದಿದ್ದಾರೆ. 1965 ಮತ್ತು 1966ರಲ್ಲಿ ಮೆರ್ಡೆಕಾ ಕಪ್ ಗೆದ್ದ ತಂಡದಲ್ಲಿ ಇದ್ದರು. 1965ರ ಮೆರ್ಡೆಕಾ ಕಪ್ ಟೂರ್ನಿಯ ಜಪಾನ್ ಎದುರಿನ ಪಂದ್ಯದಲ್ಲಿ ಪಿ.ಕೆ.ಬ್ಯಾನರ್ಜಿ ಬದಲಿಗೆ ದ್ವಿತೀಯಾರ್ಧದಲ್ಲಿ ಕಣಕ್ಕೆ ಇಳಿದಿದ್ದರು. ಅದು ಅವರ ಪದಾರ್ಪಣೆ ಪಂದ್ಯವಾಗಿತ್ತು.

1966ರ ಏಷ್ಯನ್ ಗೇಮ್ಸ್‌, 1967ರ ಏಷ್ಯಾ ಕಪ್ ಅರ್ಹತಾ ಟೂರ್ನಿಯಲ್ಲಿ ಆಡಿರುವ ಅಶೋಕ್ 1961ರಿಂದ 1968ರ ವರೆಗೆ ಮೋಹನ್ ಬಾಗನ್, 1969ರಿಂದ 1971ರ ವರೆಗೆ ಈಸ್ಟ್ ಬೆಂಗಾಲ್ ತಂಡದಲ್ಲಿ ಆಡಿದ್ದರು. ಸಂತೋಷ್ ಟ್ರೋಫಿ ಟೂರ್ನಿಯಲ್ಲಿ ಬಂಗಾಳವನ್ನು ಪ್ರತಿನಿಧಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)