ಶುಕ್ರವಾರ, ನವೆಂಬರ್ 15, 2019
22 °C
6ನೇ ಆವೃತ್ತಿಗೆ ಭಾನುವಾರ ಕೊಚ್ಚಿಯಲ್ಲಿ ಚಾಲನೆ

ಐಎಸ್‌ಎಲ್ ಉದ್ಘಾಟನೆಗೆ ಬಿಸಿಸಿಐ ಅಧ್ಯಕ್ಷ!

Published:
Updated:
Prajavani

ಕೋಲ್ಕತ್ತ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿರುವ ಸೌರವ್ ಗಂಗೂಲಿ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಉದ್ಘಾಟನಾ ಸಮಾರಂಭದಲ್ಲಿ
ಪಾಲ್ಗೊಳ್ಳಲಿದ್ದಾರೆ.

ಐಎಸ್‌ಎಲ್ ಟೂರ್ನಿಯ ಆರನೇ ಆವೃತ್ತಿಗೆ ಭಾನುವಾರ ಕೊಚ್ಚಿಯಲ್ಲಿ ಚಾಲನೆ ಸಿಗಲಿದೆ. ಮೊದಲ ಪಂದ್ಯದಲ್ಲಿ ಆತಿಥೇಯ ಕೇರಳ ಬ್ಲಾಸ್ಟರ್ಸ್ ಮತ್ತು 2 ಬಾರಿಯ ಚಾಂಪಿಯನ್ ಎಟಿಕೆ ತಂಡಗಳು ಸೆಣಸಲಿವೆ. ಗಂಗೂಲಿ ಎಟಿಕೆಯ ಸಹ ಮಾಲೀಕರಾಗಿದ್ದಾರೆ.

‘ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಕೇರಳಕ್ಕೆ ಹೋಗುತ್ತಿದ್ದೇನೆ. ಆದ್ದರಿಂದ ರಾಂಚಿಯಲ್ಲಿ ನಡೆಯಲಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಪಂದ್ಯವನ್ನು ಮಿಸ್ ಮಾಡಿಕೊಳ್ಳಲಿದ್ದೇನೆ’ ಎಂದು ಗಂಗೂಲಿ ಹೇಳಿದ್ದಾರೆ. ಮೂರನೇ ಟೆಸ್ಟ್ ಪಂದ್ಯ ಶನಿವಾರ ಆರಂಭವಾಗಲಿದೆ. ಐಎಸ್‌ಎಲ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮರುದಿನ ಮುಂಬೈ ತಲುಪಲಿರುವ ಗಂಗೂಲಿ ಅಕ್ಟೋಬರ್ 23ರಂದು ನಡೆಯಲಿರುವ ಬಿಸಿಸಿಐ ವಾರ್ಷಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

‘ನಾನು ಇನ್ನೂ ಎಟಿಕೆ ಜೊತೆ ಇದ್ದೇನೆ. ಸಹ ಮಾಲೀಕತ್ವವನ್ನು ತೊರೆಯುವ ಕುರಿತು ಸದ್ಯದಲ್ಲೇ ಸಂಬಂಧಪಟ್ಟವರ ಜೊತೆ ಮಾತನಾಡಲಿದ್ದೇನೆ’ ಎಂದು ಗಂಗೂಲಿ ತಿಳಿಸಿದರು.

**

ಮೊದಲ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ಮತ್ತು ಎರಡು ಬಾರಿಯ ಚಾಂಪಿಯನ್ ಎಟಿಕೆ ತಂಡಗಳು ಸೆಣಸಲಿವೆ. ಗಂಗೂಲಿ ಎಟಿಕೆಯ ಸಹ ಮಾಲೀಕರಾಗಿದ್ದಾರೆ.

ಪ್ರತಿಕ್ರಿಯಿಸಿ (+)