ಸೋಮವಾರ, ಮಾರ್ಚ್ 20, 2023
24 °C

ಫುಟ್‌ಬಾಲ್‌: ಗ್ಯಾರೆತ್‌ ಬೇಲ್‌ ನಿವೃತ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಂಡನ್‌ (ಎಎಫ್‌ಪಿ): ವೇಲ್ಸ್‌ ತಂಡದ ಮಿಡ್‌ಫೀಲ್ಡರ್‌ ಗ್ಯಾರೆತ್ ಬೇಲ್ ಅವರು ಕ್ಲಬ್‌ ಮತ್ತು ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ನಿವೃತ್ತಿ ಪ್ರಕಟಿಸಿದ್ದಾರೆ.

‘ಕ್ಲಬ್‌ ಹಾಗೂ ಅಂತರರಾಷ್ಟ್ರೀಯ ಫುಟ್‌ಬಾಲ್‌ನಿಂದ ತಕ್ಷಣದಿಂದಲೇ ನಿವೃತ್ತಿಯಾಗುತ್ತಿದ್ದೇನೆ. ಸಾಕಷ್ಟು ಆಲೋಚನೆಯ ಬಳಿಕ ಈ ನಿರ್ಧಾರಕ್ಕೆ ಬಂದಿದ್ದೇನೆ’ ಎಂದು 33 ವರ್ಷದ ಬೇಲ್‌ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದ್ದಾರೆ.

ಕತಾರ್‌ನಲ್ಲಿ ನಡೆದಿದ್ದ ವಿಶ್ವಕಪ್‌ ಟೂರ್ನಿಯಲ್ಲಿ ನ.29 ರಂದು ಇಂಗ್ಲೆಂಡ್‌ ವಿರುದ್ಧ ನಡೆದ ಹಣಾಹಣಿಯೇ ಅವರ ವೃತ್ತಿಜೀವನದ ಕೊನೆಯ ಪಂದ್ಯ ಎನಿಸಿದೆ.

ಬೇಲ್‌ ಅವರು ಸೌಥಾಂಪ್ಟನ್, ಟೋಟನ್‌ಹ್ಯಾಂ, ರಿಯಲ್‌ ಮ್ಯಾಡ್ರಿಡ್‌ ಹಾಗೂ ಲಾಸ್‌ ಏಂಜೆಲೀಸ್‌ ಎಫ್‌ಸಿ ಕ್ಲಬ್‌ಗಳ ಪರ ಆಡಿದ್ದಾರೆ.‌‌‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು