ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್: ಗೋಕುಲಂ ಕೇರಳಕ್ಕೆ ಸಿಗದ ಅವಕಾಶ

Last Updated 20 ಆಗಸ್ಟ್ 2022, 17:10 IST
ಅಕ್ಷರ ಗಾತ್ರ

ನವದೆಹಲಿ: ಅಂತರರಾಷ್ಟ್ರೀಯ ಫುಟ್‌ಬಾಲ್ ಸಂಸ್ಥೆಗಳ ಒಕ್ಕೂಟವು (ಫಿಫಾ) ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್‌ (ಎಐಎಫ್‌ಎಫ್‌) ಮೇಲೆ ನಿಷೇಧ ಹೇರಿರುವ ಕಾರಣ ಗೋಕುಲಂ ಕೇರಳ ಮಹಿಳಾ ತಂಡಕ್ಕೆ ಎಎಫ್‌ಸಿ ಕ್ಲಬ್‌ ಚಾಂಪಿಯನ್‌ಷಿಪ್‌ನಲ್ಲಿ ಆಡುವ ಅವಕಾಶ ಲಭಿಸಿಲ್ಲ.

ಉಜ್ಬೆಕಿಸ್ತಾನದಲ್ಲಿ ನಿಗದಿ ಯಾಗಿರುವ ಚಾಂಪಿಯನ್‌ಷಿಪ್‌ನಲ್ಲಿ ಅನುಮತಿ ಸಿಗದ ಹಿನ್ನೆಲೆಯಲ್ಲಿ ಆಶಾ ಲತಾ ದೇವಿ ನಾಯಕತ್ವದ ತಂಡವು ಸೋಮವಾರ ಭಾರತಕ್ಕೆ ಮರಳಲಿದೆ.

‘ಮೂರನೇ ವ್ಯಕ್ತಿಗಳ ಅನಗತ್ಯ ಹಸ್ತಕ್ಷೇಪ’ದ ಕಾರಣ ನೀಡಿ ಫಿಫಾ, ಆ.16 ರಂದು ಎಐಎಫ್‌ಎಫ್‌ಅನ್ನು ಅಮಾನತು ಮಾಡಿತ್ತು.

ಗೋಕುಲಂ ಕೇರಳ ತಂಡ ಮೊದಲ ಚಾಂಪಿಯನ್‌ಷಿಪ್‌ನ ಮೊದಲ ಪಂದ್ಯದಲ್ಲಿ ಆ.23 ರಂದು ಇರಾನ್‌ನ ಕ್ಲಬ್‌ಅನ್ನು ಎದುರಿಸಬೇಕಿತ್ತು.

‘ಎಐಎಫ್‌ಎಫ್‌ ಮೇಲೆ ಅಮಾನತು ಇದ್ದರೂಗೋಕುಲಂಕೇರಳಮತ್ತು ಎಟಿಕೆ ಮೋಹನ್‌ ಬಾಗನ್‌ ಕ್ಲಬ್‌ಗಳಿಗೆ ಮುಂಬರುವ ಟೂರ್ನಿಗಳಲ್ಲಿ ಆಡಲು ಅವಕಾಶ ನೀಡಬೇಕು’ ಎಂದು ಕೇಂದ್ರ ಕ್ರೀಡಾ ಸಚಿವಾಲಯವು ಫಿಫಾ ಹಾಗೂ ಏಷ್ಯನ್‌ ಫುಟ್‌ಬಾಲ್‌ ಕಾನ್ಫೆಡರೇಷನ್‌ಗೆ (ಎಎಫ್‌ಸಿ) ಮನವಿ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT