ಶುಕ್ರವಾರ, ಏಪ್ರಿಲ್ 10, 2020
19 °C

ಒಡಿಶಾ ತಂಡದಿಂದ ಹೊರನಡೆದ ಗೊಂಬು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಭುವನೇಶ್ವರ: ಪರಸ್ಪರ ಸಮ್ಮತಿಯ ಮೇರೆಗೆ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್ಎಲ್‌) ತಂಡ ಒಡಿಶಾ ಎಫ್‌ಸಿಯಿಂದ ಕೋಚ್‌ ಜೋಸೆಪ್‌ ಗೊಂಬು ಬುಧವಾರ ನಿರ್ಗಮಿಸಿದ್ದಾರೆ.

ಕೌಟುಂಬಿಕ ಕಾರಣಗಳಿಂದ ಸ್ಪೇನ್‌ ಮೂಲದ ತರಬೇತುದಾರ ಈ ನಿರ್ಧಾರಕ್ಕೆ ಬಂದಿದ್ದಾರೆ.

‘ಬದುಕಿನಲ್ಲಿ ಫುಟ್‌ಬಾಲ್‌ಗಿಂತ ಮಹತ್ವದ ವಿಷಯಗಳಿರುತ್ತವೆ. ಕ್ಲಬ್‌ ಪರ ಕೆಲಸ ಮಾಡಿದ್ದಕ್ಕೆ ಗೊಂಬು, ಅವರ ತರಬೇತು ಸಿಬ್ಬಂದಿಗೆ ಹೃದಯಾಂತರಾಳದ ಕೃತಜ್ಞತೆಗಳು’ ಎಂದು ಕ್ಲಬ್‌ ಅಧ್ಯಕ್ಷ ರೋಹನ್‌ ಶರ್ಮಾ ತಿಳಿಸಿದ್ದಾರೆ.

ಗೊಂಬು 2018ರಲ್ಲಿ, ಐಎಸ್‌ಎಲ್‌ನ ಐದನೇ ಆವೃತ್ತಿಗೆ ಮುನ್ನ ಒಡಿಶಾ ಎಫ್‌ಸಿ (ಈ ಹಿಂದೆ ಡೆಲ್ಲಿ ಡೈನಮೋಸ್‌ ತಂಡ) ತಂಡಕ್ಕೆ ಕೋಚ್‌ ಆಗಿ ಸೇರ್ಪಡೆಯಾಗಿದ್ದರು. ಈ ಋತುವಿನಲ್ಲಿ ಒಡಿಶಾ ಎಫ್‌ಸಿ ಸ್ವಲ್ಪದರಲ್ಲೇ ಪ್ಲೇ ಆಫ್‌ ಅವಕಾಶ ಕಳೆದುಕೊಂಡಿತ್ತು.

‘ಈ ನಿರ್ಧಾರ ಸುಲಭದ್ದಾಗಿರಲಿಲ್ಲ. ಒಡಿಶಾ ಎಫ್‌ಸಿಯೊಂದಿಗಿನ ಅವಧಿಯನ್ನು ಖುಷಿಯಿಂದ ಕಳೆದಿದ್ದೇನೆ. ತಂಡವನ್ನು ಕಟ್ಟಿದ ರೀತಿಗೆ ಹೆಮ್ಮೆಯಿದೆ’ ಎಂದಿದ್ದಾರೆ ಗೊಂಬು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)