ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್ ಲೋಕದ ನವತಾರೆಯಾಗುವತ್ತ ಎರ್ಲಿಂಗ್ ಹಾಲಾಂಡ್

Published 9 ಜೂನ್ 2023, 15:27 IST
Last Updated 9 ಜೂನ್ 2023, 15:27 IST
ಅಕ್ಷರ ಗಾತ್ರ

ಮ್ಯಾಂಚೆಸ್ಟರ್ (ಎಪಿ): ಲಯೊನೆಲ್ ಮೆಸ್ಸಿ ಇಂಟರ್‌ ಮಿಯಾಮಿ ಕ್ಲಬ್‌ಗೆ ಹಾಗೂ ಕ್ರಿಸ್ಟಿಯಾನೊ ರೊನಾಲ್ಡೊ ಈಗಾಗಲೇ ಸೌದಿ ಆರೇಬಿಯಾ ಸೇರಿರುವುದರಿಂದ ವಿಶ್ವದ ಫುಟ್‌ಬಾಲ್ ಕ್ರೀಡೆಯ ಹೊಸ ತಾರೆಗಳ ಹುಡುಕಾಟ ಆರಂಭವಾಗಿದೆ.

’ಗೋಲ್ ಯಂತ್ರ‘ ಎಂದೇ ಕರೆಸಿಕೊಳ್ಳುತ್ತಿರುವ ಮ್ಯಾಂಚೆಸ್ಟರ್ ಸಿಟಿ ಕ್ಲಬ್‌ನ ಎರ್ಲಿಂಗ್ ಹಾಲಾಂಡ್ ಮೇಲೆ ಈಗ ಎಲ್ಲರ ಚಿತ್ತ ನೆಟ್ಟಿದೆ. ಭವಿಷ್ಯದ ತಾರೆಯಾಗುವ ಎಲ್ಲ ಅರ್ಹತೆಗಳೂ ಅವರಲ್ಲಿವೆ ಎಂದು ಹೇಳಲಾಗುತ್ತಿದೆ.

6 ಅಡಿ 4 ಇಂಚು ಎತ್ತರದ ನಾರ್ವೆ ಮೂಲದ ಎರ್ಲಿಂಗ್‌ ಅವರಿಗೆ ಈಗ 22 ವರ್ಷ. ಮೊದಲ ಆವೃತ್ತಿಯ ಕ್ಲಬ್‌ ಪಂದ್ಯಗಳಲ್ಲಿ ಅವರು ಗೋಲು ಗಳಿಕೆಯ ದಾಖಲೆಗಳನ್ನು ನಿರ್ಮಿಸುತ್ತಿದ್ದಾರೆ. ರಕ್ಷಣಾತ್ಮಕ ತಂತ್ರಗಳಲ್ಲಿಯೂ ಉತ್ತಮವಾಗಿದ್ದಾರೆ.

ಆದರೆ ಅವರು ಪ್ಯಾರಿಸ್ ಸೇಂಟ್ ಜರ್ಮೈನ್ ತಂಡದ ಫಾರ್ವರ್ಡ್ ಕೈಲಿಯನ್ ಎಂಬಾಪೆ ಮತ್ತು ರಿಯಲ್ ಮ್ಯಾಡ್ರಿಡ್‌ನ ವಿಂಗರ್ ವಿನಿಸಿಯಸ್ ಜೂನಿಯರ್ ಅವರ ಸ್ಪರ್ಧೆಯನ್ನು ಮೀರಿ ನಿಲ್ಲಬೇಕಿದೆ. 

ಆದರೆ  ಫುಟ್‌ಬಾಲ್ ಲೀಗ್‌ಗಳಲ್ಲಿ ಈಗ ಎರ್ಲಿಂಗ್‌ ಹೆಸರು ಬಾರಿ ಸದ್ದು ಮಾಡುತ್ತಿದೆ. ಹೋದ ಶನಿವಾರ ಮೊದಲ ಚಾಂಪಿಯನ್ಸ್‌ ಲೀಗ್ ಪ್ರಶಸ್ತಿಯನ್ನು ಅವರ ತಂಡವು ಗೆದ್ದಿತ್ತು. ಪ್ರೀಮಿಯರ್ ಲೀಗ್ ಮತ್ತು ಎಫ್‌ಎ ಕಪ್ ಯಶಸ್ಸು ಕೂಡ ಇದೇ ಋತುವಿನಲ್ಲಿ ದಾಖಲಾಗಿದೆ. ಎರ್ಲಿಂಗ್ ಅವರ ಗೋಲು ಗಳಿಕೆಯ ಪ್ರತಿಭೆ ಮತ್ತು ಶೈಲಿ ಎಲ್ಲರ ಗಮನ ಸೆಳೆಯುತ್ತಿದೆ.

ಯುರೋಪಿಯನ್‌ ಲೀಗ್‌ನ ಪ್ರತಿಷ್ಠಿತ ತಂಡಗಳಾದ ರಿಯಲ್ ಮ್ಯಾಡ್ರಿಡ್ ಮತ್ತು ಮ್ಯಾಂಚೆಸ್ಟರ್‌ ಯುನೈಟೆಡ್ ಆಟಗಾರರೂ ಎರ್ಲಿಂಗ್ ಆಟಕ್ಕೆ ಮನಸೋತಿದ್ದಾರೆ. ಪ್ರೀಮಿಯರ್ ಲೀಗ್‌ ನಲ್ಲಿ ದಾಖಲೆಯ 34 ಗೋಲುಗಳನ್ನು ಅವರು ಗಳಿಸಿದ್ದಾರೆ. ಆ್ಯಂಡಿ ಕೋಲ್ ಹಾಗೂ ಅಲನ್ ಶೀರರ್ ಅವರ ದಾಖಲೆಯನ್ನು ಸಮಗಟ್ಟಿದ್ದಾರೆ.

ಎಲ್ಲ ಸ್ಪರ್ಧೆಗಳಲ್ಲಿಯೂ ಸೇರಿ ಒಟ್ಟು 52 ಗೋಲುಗಳು ಅವರ ಖಾತೆಯಲ್ಲಿವೆ. ಅದರಲ್ಲಿ ಆರು ಹ್ಯಾಟ್ರಿಕ್‌ಗಳು ಸೇರಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT