ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್‌‌ ಸಂಸ್ಥೆ ಅಧ್ಯಕ್ಷ ತಾತ್ಕಾಲಿಕ ಅಮಾನತು

ಲೈಂಗಿಕ ಕಿರುಕುಳ ಆರೋಪ
Last Updated 26 ಮೇ 2020, 19:45 IST
ಅಕ್ಷರ ಗಾತ್ರ

ಪೋರ್ಟ್‌ ಅವು ಪ್ರಿನ್ಸ್‌, ಹೈತಿ: ರಾಷ್ಟ್ರೀಯ ತರಬೇತಿ ಕೇಂದ್ರದಲ್ಲಿದ್ದ ಯುವ ಆಟಗಾರ್ತಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಹೈತಿ ಫುಟ್‌ಬಾಲ್‌ ಫೆಡರೇಷನ್‌ ಅಧ್ಯಕ್ಷ ಯವೆಸ್‌ ಜೀನ್‌ ಬಾರ್ಟ್‌ ಅವರನ್ನು ಫಿಫಾ, ಮಂಗಳವಾರ ಅಮಾನತು ಮಾಡಿದೆ.

ಬಾರ್ಟ್‌, ಹಿಂದಿನ ಐದು ವರ್ಷಗಳಿಂದ ಹಲವು ಆಟಗಾರ್ತಿಯರನ್ನು ಬಲತ್ಕಾರ ಮಾಡಿದ್ದಾರೆ ಎಂದು ಹಲವರು ದೂರಿದ್ದಾರೆ. 73 ವರ್ಷ ವಯಸ್ಸಿನ ಬಾರ್ಟ್‌,ಈ ಆರೋಪಗಳನ್ನು ಅಲ್ಲಗಳೆದಿದ್ದಾರೆ.

‘ಫಿಫಾ ನೀತಿ ಸಂಹಿತೆಯ 84 ಮತ್ತು 85ನೇ ವಿಧಿಗಳ ಅನುಸಾರ ಸ್ವತಂತ್ರ ತನಿಖಾ ಸಮಿತಿಯು ಬಾರ್ಟ್‌ ಅವರನ್ನು ತಾತ್ಕಾಲಿಕವಾಗಿ ಅಮಾನತು ಮಾಡಿದೆ. ಅವರು ಮುಂದಿನ 90 ದಿನಗಳ ಕಾಲ ಯಾವುದೇ ಫುಟ್‌ಬಾಲ್‌ ಚಟುವಟಿಕೆಗಳಲ್ಲಿ ಭಾಗವಹಿಸುವಂತಿಲ್ಲ’ ಎಂದು ಫಿಫಾ, ಸೋಮವಾರ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT