ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಬೊಲಿವಿಯಾ ಫುಟ್‌ಬಾಲ್‌ ಮುಖ್ಯಸ್ಥ ಸಾವು

Last Updated 20 ಜುಲೈ 2020, 13:20 IST
ಅಕ್ಷರ ಗಾತ್ರ

ಲಾ ಪಾಜ್‌: ಬೊಲಿವಿಯಾ ಫುಟ್‌ಬಾಲ್‌ ಕ್ಲಬ್‌ ಅಧ್ಯಕ್ಷ ಸೇಸರ್‌ ಸಾಲಿನಾಸ್ (58)‌ ಅವರುಕೋವಿಡ್‌–19 ಸೋಂಕಿನಿಂದ ಮೃತಪಟ್ಟಿದ್ದಾರೆ. ಅಲ್ಲಿಯ ಫುಟ್‌ಬಾಲ್‌ ಫೆಡರೇಷನ್‌ ಭಾನುವಾರ ಸಾಮಾಜಿಕ ಜಾಲತಾಣಗಳ ಮೂಲಕಈ ವಿಷಯವನ್ನು ತಿಳಿಸಿದೆ.

ಕೊರೊನಾ ಸೋಂಕು ದೃಢಪಟ್ಟಿದ್ದ ಸಾಲಿನಾಸ್‌ ಅವರನ್ನು ಚಿಕಿತ್ಸೆಗಾಗಿ ಲಾ ಪಾಜ್‌ನ ಖಾಸಗಿ ಕ್ಲಿನಿಕ್‌ಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಬೊಲಿವಿಯದ ಫುಟ್‌ಬಾಲ್‌ ಕ್ಲಬ್‌ ’ದ ಸ್ಟ್ರಾಂಗೆಸ್ಟ್‌‘ನ ಮಾಜಿ ಅಧ್ಯಕ್ಷರಾಗಿದ್ದ ಸಾಲಿನಾಸ್‌, ತರುವಾಯ 2018ರಲ್ಲಿ ರಾಷ್ಟ್ರೀಯ ಫೆಡರೇಷನ್‌ ಅಧ್ಯಕ್ಷ ಗಾದಿಗೆ ಏರಿದ್ದರು. ಆ ಮೂಲಕ ದಕ್ಷಿಣ ಅಮೆರಿಕಾ ಫುಟ್‌ಬಾಲ್‌ ಫೆಡರೇಷನ್‌ ’ಕಾನ್‌ಮೆಬಾಲ್‌‘ನ ಕಾರ್ಯಕಾರಿ ಸಮಿತಿಯಲ್ಲೂ ಸ್ಥಾನ ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT