ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಗರಿಯಲ್ಲಿ ಕಾಲ್ಚಳಕದ ಸವಿಯುಂಡ ಪ್ರೇಕ್ಷಕರು

Last Updated 31 ಮೇ 2020, 19:30 IST
ಅಕ್ಷರ ಗಾತ್ರ

ಮಿಸ್‌ಕಾಕ್, ಹಂಗರಿ: ಎರಡು ತಿಂಗಳ ನಂತರ ಹಂಗರಿಯ ಫುಟ್‌ಬಾಲ್ ಪ್ರಿಯರು ಕ್ರೀಡಾಂಗಣದಲ್ಲಿ ಕಾಲ್ಚಳಕದ ಸವಿಯುಂಡರು. ಒಂದು ಸಾಲು ಬಿಟ್ಟು ಒಂದು ಸಾಲಿನಲ್ಲಿ, ನಾಲ್ಕು ಆಸನಗಳ ಅಂತರ ಕಾಯ್ದುಕೊಂಡು ಕುಳಿತುಕೊಳ್ಳುವ ಷರತ್ತುಗಳಿಗೆ ಅವರು ಬದ್ಧರಾಗಿದ್ದರು.

ಕೊರೊನಾ ಹಾವಳಿಯ ನಡುವೆಯೇ ಹಂಗೆರಿ ಫುಟ್‌ಬಾಲ್ ಸಂಸ್ಥೆ ವಾರಾಂತ್ಯದಲ್ಲಿ ಪ್ರೇಕ್ಷಕರನ್ನು ಕ್ರೀಡಾಂಗಣದ ಒಳಗೆ ಬಿಡುವ ನಿರ್ಧಾರವನ್ನುಕಳೆದ ಗುರುವಾರ ಪ್ರಕಟಿಸಿತ್ತು. ಯುರೋಪಿನ ಇತರ ರಾಷ್ಟ್ರಗಳಲ್ಲಿ ಫುಟ್‌ಬಾಲ್ ಇನ್ನೂ ಪ್ರೇಕ್ಷಕರಿಲ್ಲದೇ ನಡೆಯುತ್ತಿದೆ.

ಈಶಾನ್ಯ ವಲಯ ನಗರವಾದ ಮಿಸ್‌ಕಾಕ್‌ನ ಡಯಾಸ್‌ಗಿಯೋರ್ ಕ್ರೀಡಾಂಗಣದಲ್ಲಿ ಸೇರಿದ್ದ ಕ್ರೀಡಾಪ್ರಿಯರು, ‘ನೆಚ್ಚಿನ ಆಟಗಾರರನ್ನು ಹತ್ತಿರದಿಂದ ನೋಡಲು ಮತ್ತು ಆಟವನ್ನು ಸವಿಯಲು ಅವಕಾಶ ಲಭಿಸಿದ್ದರಿಂದ ಖುಷಿಯಾಗಿದೆ’ ಎಂದರು.

‘ವೈರಸ್ ಬಗ್ಗೆ ಏನೂ ಹೇಳಲಾಗದು. ಅದು ಇನ್ನೂ ಸಂಪೂರ್ಣ ನಾಶವಾಗಲಿಲ್ಲ. ಆದ್ದರಿಂದ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯ’ ಎಂದು 18 ವರ್ಷದ ವಿದ್ಯಾರ್ಥಿ ಸಾಬಾ ಗಸ್ಬರಿಕ್ಸ್ ಹೇಳಿದರು.

ಶನಿವಾರ ಮತ್ತು ಭಾನುವಾರ ಒಟ್ಟು ಆರು ಪಂದ್ಯಗಳು ನಡೆದವು. ಮೊದಲ ಪಂದ್ಯವನ್ನು 2,255 ಮಂದಿ ವೀಕ್ಷಿಸಿದರು. ಹಂಗರಿಯಲ್ಲಿ ಈ ವರೆಗೆ 3876 ಕೋವಿಡ್ ಪ್ರಕರಣಗಳು ವರದಿಯಾಗಿದ್ದು 526 ಮಂದಿ ಸಾವಿಗೀಡಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT