ಸೋಮವಾರ, ನವೆಂಬರ್ 18, 2019
20 °C

ಹೈದರಾಬಾದ್‌ಗೆ ಜಯದ ಸಿಂಚನ

Published:
Updated:

ಹೈದರಾಬಾದ್‌: ತವರಿನ ಅಭಿಮಾನಿಗಳ ಎದುರು ಅಮೋಘ ಆಟ ಆಡಿದ ಹೈದರಾಬಾದ್‌ ಎಫ್‌ಸಿ ತಂಡ ಇಂಡಿಯನ್‌ ಸೂಪರ್‌ ಲೀಗ್‌ನಲ್ಲಿ (ಐಎಸ್‌ಎಲ್‌) ಮೊದಲ ಗೆಲುವಿನ ಸಿಹಿ ಸವಿದಿದೆ.

ಈ ಬಾರಿ ಲೀಗ್‌ಗೆ ಪದಾರ್ಪಣೆ ಮಾಡಿದ್ದ ಹೈದರಾಬಾದ್‌, ಶನಿವಾರ ಇಲ್ಲಿನ ಜಿ.ಎಂ.ಸಿ.ಬಾಲಯೋಗಿ ಅಥ್ಲೆಟಿಕ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 2–1 ಗೋಲುಗಳಿಂದ ಕೇರಳ ಬ್ಲಾಸ್ಟರ್ಸ್‌ ಎಫ್‌ಸಿ ತಂಡವನ್ನು ಮಣಿಸಿತು. ಇದರೊಂದಿಗೆ ಪಾಯಿಂಟ್ಸ್‌ ಪಟ್ಟಿಯಲ್ಲಿ 10ರಿಂದ ಎಂಟನೇ ಸ್ಥಾನಕ್ಕೆ ಬಡ್ತಿ ಪಡೆಯಿತು.

ಕೇರಳ ತಂಡ 34ನೇ ನಿಮಿಷದಲ್ಲಿ ಖಾತೆ ತೆರೆಯಿತು. ಕಮಲ್‌ಜೀತ್‌ ಸಿಂಗ್‌ ತಮ್ಮತ್ತ ಒದ್ದು ಕಳುಹಿಸಿದ ಚೆಂಡನ್ನು ಕೆ.ಪಿ.ರಾಹುಲ್‌ ಗುರಿ ಮುಟ್ಟಿಸಿದರು. 54ನೇ ನಿಮಿಷದಲ್ಲಿ ಹೈದರಾಬಾದ್‌ ಸಮಬಲ ಸಾಧಿಸಿತು. ಪೆನಾಲ್ಟಿ ಅವಕಾಶದಲ್ಲಿ ಮಾರ್ಕೊ ಸ್ಟಾಂಕೊವಿಚ್‌ ಕಾಲ್ಚಳಕ ತೋರಿದರು.

81ನೇ ನಿಮಿಷದಲ್ಲಿ ಗೋಲು ಹೊಡೆದ ಮಾರ್ಷೆಲೊ ಪೆರೇರಾ, ಆತಿಥೇಯರ ಸಂಭ್ರಮಕ್ಕೆ ಕಾರಣರಾದರು.

ಪ್ರತಿಕ್ರಿಯಿಸಿ (+)