ಫುಟ್‌ಬಾಲ್‌: ಅಗ್ರಸ್ಥಾನಕ್ಕೇರಿದ ರಿಯಲ್‌ ಕಾಶ್ಮೀರ್‌

7

ಫುಟ್‌ಬಾಲ್‌: ಅಗ್ರಸ್ಥಾನಕ್ಕೇರಿದ ರಿಯಲ್‌ ಕಾಶ್ಮೀರ್‌

Published:
Updated:

ಶ್ರೀನಗರ: ಗ್ನೋಹೆರ್‌ ಕ್ರಿಜೊ ಗಳಿಸಿದ ಏಕೈಕ ಗೋಲಿನ ನೆರವಿನಿಂದ ರಿಯಲ್‌ ಕಾಶ್ಮೀರ್‌ ಎಫ್‌ಸಿ ತಂಡ ಐ ಲೀಗ್‌ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಗೆಲುವಿನ ಸಿಹಿ ಸವಿದಿದೆ.

ಬುಧವಾರ ನಡೆದ ಹಣಾಹಣಿಯಲ್ಲಿ ರಿಯಲ್‌ ಕಾಶ್ಮೀರ್‌ 1–0 ಗೋಲಿನಿಂದ ಗೋಕುಲಮ್‌ ಕೇರಳ ಎಫ್‌ಸಿ ತಂಡವನ್ನು ಸೋಲಿಸಿತು. ಇದರೊಂದಿಗೆ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. 16 ಪಂದ್ಯಗಳನ್ನು ಆಡಿರುವ ಈ ತಂಡ ಒಂಬತ್ತರಲ್ಲಿ ಗೆದ್ದು ಒಟ್ಟು 32 ಪಾಯಿಂಟ್ಸ್‌ ಕಲೆಹಾಕಿದೆ.

30 ಪಾಯಿಂಟ್ಸ್‌ ಹೊಂದಿರುವ ಚೆನ್ನೈ ಸಿಟಿ ಎಫ್‌ಸಿ ಎರಡನೇ ಸ್ಥಾನದಲ್ಲಿದೆ.

ಟಿ.ಆರ್‌.ಸಿ. ಮೈದಾನದಲ್ಲಿ ನಡೆದ ಹೋರಾಟದಲ್ಲಿ ಉಭಯ ತಂಡಗಳು ಜಿದ್ದಾಜಿದ್ದಿನಿಂದ ಸೆಣಸಿದವು. ಹೀಗಾಗಿ ಮೊದಲಾರ್ಧ ಗೋಲು ರಹಿತವಾಗಿತ್ತು. ದ್ವಿತೀಯಾರ್ಧದಲ್ಲಿ ಕಾಶ್ಮೀರ್‌ ಎಫ್‌ಸಿ ಮಿಂಚಿತು. ಐವರಿಕೋಸ್ಟಾದ ಸ್ಟ್ರೈಕರ್‌ ಕ್ರಿಜೊ 51ನೇ ನಿಮಿಷದಲ್ಲಿ ಚೆಂಡನ್ನು ಗುರಿ ಮುಟ್ಟಿಸಿ ಸಂಭ್ರಮಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !