ಮಂಗಳವಾರ, ಜನವರಿ 28, 2020
25 °C

ಐ ಲೀಗ್‌: ಅಗ್ರಸ್ಥಾನಕ್ಕೇರಿದ ಮೋಹನ್‌ ಬಾಗನ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಶ್ರೀನಗರ : ಮೈಕೊರೆಯುವ ಚಳಿಯಲ್ಲಿ ಛಲದಿಂದ ಆಡಿದ ಮೋಹನ್‌ ಬಾಗನ್‌ ತಂಡ ಐ ಲೀಗ್‌ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಗೆದ್ದಿದೆ.

ಭಾನುವಾರ ನಡೆದ ಹಣಾಹಣಿಯಲ್ಲಿ 2–0 ಗೋಲುಗಳಿಂದ ರಿಯಲ್‌ ಕಾಶ್ಮೀರ್‌ ಎಫ್‌ಸಿ ತಂಡವನ್ನು ಮಣಿಸಿದ ಬಾಗನ್‌, ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಐದು ಪಂದ್ಯಗಳನ್ನು ಆಡಿರುವ ಈ ತಂಡದ ಖಾತೆಯಲ್ಲಿ 10 ಪಾಯಿಂಟ್ಸ್‌ ಇವೆ.

ಟಿಆರ್‌ಸಿ ಮೈದಾನದಲ್ಲಿ ಬೆಳಿಗ್ಗೆ 11.30ಕ್ಕೆ ಆರಂಭವಾದ ಪಂದ್ಯದ ಮೊದಲಾರ್ಧದಲ್ಲಿ ಎರಡು ತಂಡಗಳು ಸಮಬಲದಿಂದ ಸೆಣಸಿದವು.

ದ್ವಿತೀಯಾರ್ಧದಲ್ಲಿ ಮೋಹನ್‌ ಬಾಗನ್‌ ಮೇಲುಗೈ ಸಾಧಿಸಿತು. ಈ ತಂಡದ ಜೋಸೆಬಾ ಬೆಯಿಟಿಯಾ 71ನೇ ನಿಮಿಷದಲ್ಲಿ ಕಾಲ್ಚಳಕ ತೋರಿದರು.

ಇದರ ಬೆನ್ನಲ್ಲೇ (73ನೇ ನಿಮಿಷ) ಚೆಂಡನ್ನು ಗುರಿ ಮುಟ್ಟಿಸಿದ ನಾಂಗ್‌ದಾಂಬಾ ನಾವೊರೆಮ್‌ ಅವರು ಬಾಗನ್‌ ತಂಡದ ಗೆಲುವನ್ನು ಖಾತ್ರಿ ಪಡಿಸಿದರು.

ನಂತರದ ಅವಧಿಯಲ್ಲಿ ಕಾಶ್ಮೀರ್‌ ಎಫ್‌ಸಿ ತಂಡ ಗೋಲು ಗಳಿಸಲು ನಡೆಸಿದ ಪ್ರಯತ್ನಕ್ಕೆ ಯಶಸ್ಸು ಸಿಗಲಿಲ್ಲ.

ನಾಲ್ಕು ಪಂದ್ಯಗಳನ್ನು ಆಡಿರುವ ಕಾಶ್ಮೀರ್‌ ಎಫ್‌ಸಿ ಖಾತೆಯಲ್ಲಿ ಐದು ಪಾಯಿಂಟ್ಸ್‌ ಇವೆ. ಈ ತಂಡ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು