ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಡ್ರಾ ಪಂದ್ಯದಲ್ಲಿ ಯುನೈಟೆಡ್‌– ಇಂಡಿಪೆಂಡೆಂಟ್‌ ಎಫ್‌ಸಿ

Published : 25 ಸೆಪ್ಟೆಂಬರ್ 2024, 13:57 IST
Last Updated : 25 ಸೆಪ್ಟೆಂಬರ್ 2024, 13:57 IST
ಫಾಲೋ ಮಾಡಿ
Comments

ಬೆಂಗಳೂರು: ಎಫ್‌ಸಿ ಬೆಂಗಳೂರು ಯುನೈಟೆಡ್‌ ತಂಡವು ಸಿ. ಪುಟ್ಟಯ್ಯ ಸ್ಮಾರಕ ಕಪ್‌ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಬೆಂಗಳೂರು ಇಂಡಿಪೆಂಡೆಂಟ್‌ ಎಫ್‌ಸಿ ಜೊತೆ ಡ್ರಾ ಸಾಧಿಸಿತು.

ಬೆಂಗಳೂರು ಫುಟ್‌ಬಾಲ್‌ ಮೈದಾನದಲ್ಲಿ ಬುಧವಾರ ನಡೆದ ‘ಡಿ’ ಗುಂಪಿನ ಪಂದ್ಯವು ಗೋಲುರಹಿತವಾಗಿ ಕೊನೆಗೊಂಡಿತು. ಎರಡೂ ತಂಡಗಳು ಆಕ್ರಮಣಕಾರಿ ಆಟವನ್ನು ಆಡಿದವು. ಆದರೆ, ತಮಗೆ ಸಿಕ್ಕ ಗೋಲು ಗಳಿಸುವ ಅವಕಾಶಗಳನ್ನು ಕೈಚೆಲ್ಲಿತು.

ತಂಡ ಪ್ರಕಟಿಸಿದ ಬಿಎಫ್‌ಸಿ: ಬೆಂಗಳೂರು ಎಫ್‌ಸಿ ತಂಡವು ಸಿ. ಪುಟ್ಟಯ್ಯ ಸ್ಮಾರಕ ಕಪ್‌ ಫುಟ್‌ಬಾಲ್‌ ಟೂರ್ನಿಗಾಗಿ 32 ಸದಸ್ಯರ ತಂಡವನ್ನು ಪ್ರಕಟಿಸಿದೆ. ಅನುಭವಿಗಳ ಜೊತೆ ಹೊಸ ಮುಖಗಳಿಗೆ ಅವಕಾಶ ನೀಡಿದೆ.

ಬಿಎಫ್‌ಸಿ ತಂಡವು ಇದೇ 28ರಂದು ಎಫ್‌ಸಿ ಬೆಂಗಳೂರು ಯುನೈಟೆಡ್‌ ವಿರುದ್ಧ ಅಭಿಯಾನ ಆರಂಭಿಸಲಿದೆ.

ತಂಡ ಹೀಗಿದೆ: ಶುಭಂ ಮಲಿಕ್, ಸಾಹಿಲ್ ಪೂನಿಯಾ, ಪೃಥ್ವಿರಾಜ್ ದಾಶ್, ಸುಹೈದ್ ಕೋಯಾ ತಂಗಲ್ ಪಿ.ಎಸ್, ನಂಗ್‌ಬಾಮ್ ಸೂರಜ್‌ಕುಮಾರ್ ಸಿಂಗ್, ಫೆಲಕ್ಸನ್ ಕೋನಿ ಫರ್ನಾಂಡಿಸ್, ಹರ್ಷ್ ಪಲಾಂಡೆ, ತೊಕ್ಚೊಂ ಮಲೆಮಂಗಂಬಾ ಸಿಂಗ್, ಆಶಿಕ್ ಅಧಿಕಾರಿ, ಕ್ಲಾರೆನ್ಸ್ ಸಾವಿಯೊ ಫರ್ನಾಂಡಿಸ್, ದಿವಿಜ್ ಸುಪ್ರನೇನಿ, ಶಿವಲ್ದೊ ಸಿಂಗ್, ಮಾನವ್ ಗೌಡ, ಸೋಹುಮ್ ಉತ್ರೇಜಾ, ಶ್ರೇಯಜ್ ಮಂಚೋಜಿ, ಮೃದುಲ್ ತಮ್ತಾ, ಉತ್ತಮ್ ಪಿ, ಸ್ವಸ್ತಿಕ್ ಚಂದ್, ಶ್ರೇಯಸ್ ಕೇತ್ಕರ್, ಸೋಹಮ್ ವರ್ಷ್ಣೇಯ, ಗೌತಮ್ ಶಿವಕುಮಾರ್, ರಶೀದ್ ಸಿ.ಕೆ, ಓನಮ್ ರೊನೆಕ್ಸ್ ಮೈಟೆಯಿ, ತಾರೆಮ್ ಕೆಲ್ವಿನ್ ಸಿಂಗ್, ಚಾಫಮಯುಮ್ ರೋಹೆನ್ ಸಿಂಗ್, ಜೋಶುವಾ ಡಿಸಿಲ್ವ, ಶಾಶ್ವತ್ ಪನ್ವಾರ್, ಪ್ರಾಂತಿಕ್ ಸಹಾ, ಸಾರಂಗ್ ಶ್ರೀನಿವಾಸನ್ ಚಾರಿ, ರೋಹಿತ್ ದಾನು, ಮೊನಿರುಲ್ ಮೊಲ್ಲಾ, ನೀ ಹ್ಯಾಂಗ್ ಸುಬ್ಬಾ. ಮುಖ್ಯ ಕೋಚ್: ಬಿಬಿಯಾನೊ ಫರ್ನಾಂಡಿಸ್.

ಇಂದಿನ ಪಂದ್ಯಗಳು

ರೆಬೆಲ್ಸ್‌ ಎಫ್‌ಸಿ– ಕೊಡಗು ಎಫ್‌ಸಿ (ಮಧ್ಯಾಹ್ನ 1)

ಪರಿಕ್ರಮ ಎಫ್‌ಸಿ– ಎಫ್‌ಸಿ ಅಗ್ನಿಪುತ್ರ (ಸಂಜೆ 4)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT