ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಎಫ್‌ಸಿ ಒಲಿಂಪಿಕ್ ಅರ್ಹತಾ ಸುತ್ತಿನ ಫುಟ್‌ಬಾಲ್: ಭಾರತಕ್ಕೆ ಮಣಿದ ಬಾಂಗ್ಲಾದೇಶ

ನಾಲ್ಕು ಗೋಲು ಗಳಿಸಿದ ಬಾಲಾ ದೇವಿ
Last Updated 11 ನವೆಂಬರ್ 2018, 17:37 IST
ಅಕ್ಷರ ಗಾತ್ರ

ಯಾಂಗನ್‌, ಮ್ಯಾನ್ಮಾರ್‌: ಬಾಲಾ ದೇವಿ ಗಳಿಸಿದ ನಾಲ್ಕು ಗೋಲುಗಳ ಬಲದಿಂದ ಭಾರತ ಮಹಿಳಾ ತಂಡದವರು 2020ರ ಒಲಿಂಪಿಕ್ಸ್‌ಗಾಗಿ ನಡೆಯುತ್ತಿರುವ ಎಎಫ್‌ಸಿ ಅರ್ಹತಾ ಸುತ್ತಿನ ಫುಟ್‌ಬಾಲ್ ಟೂರ್ನಿಯಲ್ಲಿ ಭರ್ಜರಿ ಜಯ ಸಾಧಿಸಿದರು.

ಇಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಭಾರತ 7–1ರಿಂದ ಮಣಿಸಿತು.

ಆರಂಭದಲ್ಲಿ ಬಾಂಗ್ಲಾದೇಶ ತಂಡ ಪ್ರಬಲ ಪೈಪೋಟಿ ಒಡ್ಡಿತ್ತು. ಆದರೆ ಮೊದಲ ಗೋಲು ಗಳಿಸಿದ ನಂತರ ಭಾರತದ ಆತ್ಮವಿಶ್ವಾಸ ಹೆಚ್ಚಿತು. ನಂತರ ಪಂದ್ಯ ಏಕಪಕ್ಷೀಯವಾಯಿತು.

ಐದನೇ ನಿಮಿಷದಲ್ಲಿ ಭಾರತದ ರತನ್ ಬಾಲಾ ದೇವಿ ಅವರಿಗೆ ಉತ್ತಮ ಗೋಲು ಗಳಿಸುವ ಉತ್ತಮ ಅವಕಾಶ ಒದಗಿತ್ತು. ಆದರೆ ಅವರು ಒದ್ದ ಚೆಂಡು ಗೋಲುಪೆಟ್ಟಿಗೆಯಿಂದ ಹೊರಗೆ ಸಾಗಿತು. 11ನೇ ನಿಮಿಷದಲ್ಲಿ ಬಾಂಗ್ಲಾದೇಶವೂ ಅವಕಾಶವನ್ನು ಕೈಚೆಲ್ಲಿತು. ಮೊಸಮ್ಮತ್‌ ಅವರ ಪ್ರಯತ್ನವನ್ನು ಭಾರತದ ದಾಲಿಮಾ ಚಿಬ್ಬರ್‌ ವಿಫಲಗೊಳಿಸಿದರು.

16ನೇ ನಿಮಿಷದಲ್ಲಿ ಕಮಲಾದೇವಿ ಮೂಲಕ ಭಾರತ ಖಾತೆ ತೆರೆಯಿತು. 22 ಮತ್ತು 23ನೇ ನಿಮಿಷದಲ್ಲಿ ಬಾಲಾದೇವಿ ಗೋಲು ಗಳಿಸಿ ಮುನ್ನಡೆಯನ್ನು ಹೆಚ್ಚಿಸಿದರು.

ಮಳೆ; ಗೋಲು ಮಳೆ: ದ್ವಿತೀಯಾರ್ಧದ ಆರಂಭಕ್ಕೂ ಮುನ್ನ ಧಾರಾಕಾರ ಮಳೆ ಸುರಿಯಿತು. ಭಾರತ ಗೋಲು ಮಳೆಯನ್ನು ಸುರಿಸಿತು. 53ನೇ ನಿಮಿಷದಲ್ಲಿ ಕಮಾಲದೇವಿ ವೈಯಕ್ತಿಕ ಎರಡನೇ ಗೋಲು ದಾಖಲಿಸಿದರು. 62ನೇ ನಿಮಿಷದಲ್ಲಿ ಬಾಲಾದೇವಿ ಹ್ಯಾಟ್ರಿಕ್ ಗಳಿಸಿ ಮಿಂಚಿದರು. 72ನೇ ನಿಮಿಷದಲ್ಲಿ ಮತ್ತೊಮ್ಮೆ ಚೆಂಡನ್ನು ಗುರಿ ಮುಟ್ಟಿಸಿದರು. ಮೂರು ನಿಮಿಷಗಳ ನಂತರ ಸಂಜು ಅವರು ಭಾರತದ ಏಳನೇ ಗೋಲು ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT