ಶುಕ್ರವಾರ, ಅಕ್ಟೋಬರ್ 18, 2019
20 °C
ಸ್ಯಾಫ್‌ 18 ವರ್ಷದೊಳಗಿನವರ ಫುಟ್‌ಬಾಲ್‌ ಟೂರ್ನಿ

ಬಾಂಗ್ಲಾ ಎದುರು ಡ್ರಾ ಸಾಧಿಸಿದ ಭಾರತ

Published:
Updated:

ಕಠ್ಮಂಡು: ಭಾರತ ತಂಡವು ಸ್ಯಾಫ್‌ 18 ವರ್ಷದೊಳಗಿನವರ ಫುಟ್‌ಬಾಲ್‌ ಟೂರ್ನಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಸೋಮವಾರ ಗೋಲು ರಹಿತ ಡ್ರಾ ಸಾಧಿಸಿದೆ.

ಪಂದ್ಯದ ಆರಂಭದಿಂದಲೇ ಭಾರತ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಒಂಬತ್ತನೇ ನಿಮಿಷದಲ್ಲಿ ತಂಡದ ಗೋಲ್‌ಕೀಪರ್‌ ಪ್ರಭಶುಕನ್‌ ಸಿಂಗ್‌ ಗಿಲ್‌ ಗಾಯಗೊಂಡು ಹೊರಗುಳಿದದ್ದು ತಂಡಕ್ಕೆ ದುಬಾರಿಯಾಯಿತು. ಬಾಂಗ್ಲಾ ತಂಡದ ಡಿಫೆನ್ಸ್ ವಿಭಾಗ ಬಲಿಷ್ಠವಾಗಿತ್ತು. 

36ನೇ ನಿಮಿಷದಲ್ಲಿ ಸುಮಿತ್‌ ರಾಠಿ ಹೆಡರ್‌ ಮೂಲಕ ಗೋಲು ಬಾರಿಸಲು ಪ್ರಯತ್ನಿಸಿದರು. ಆದರೆ ಚೆಂಡು ಸ್ವಲ್ಪವೇ ಅಂತರದಲ್ಲಿ ಆವರಣದ ಹೊರಗೆ ಹೋಯಿತು. ಹಲವು ಬಾರಿ ಪ್ರಯತ್ನಿಸಿದರೂ ಭಾರತಕ್ಕೆ ಗೋಲು ಗಳಿಸುವ ಅವಕಾಶ ಲಭಿಸಲಿಲ್ಲ. 

ಭಾರತ ಮುಂದಿನ ಪಂದ್ಯವನ್ನು ಬುಧವಾರ ಶ್ರೀಲಂಕಾ ವಿರುದ್ಧ ಆಡಲಿದೆ. ಮೊದಲ ಪಂದ್ಯದಲ್ಲಿ ಶ್ರೀಲಂಕಾ, ಬಾಂಗ್ಲಾ ತಂಡಕ್ಕೆ 0–3ರಿಂದ ಸೋತಿತ್ತು.

Post Comments (+)