ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯಾ ಕಪ್‌ ಫುಟ್‌ಬಾಲ್‌: ‘ಬಿ’ ಗುಂಪಿನಲ್ಲಿ ಭಾರತ

Published 11 ಮೇ 2023, 14:07 IST
Last Updated 11 ಮೇ 2023, 14:07 IST
ಅಕ್ಷರ ಗಾತ್ರ

ದೋಹಾ (ಪಿಟಿಐ/ ಎಎಫ್‌ಪಿ): ಮುಂದಿನ ವರ್ಷ ನಡೆಯಲಿರುವ ಏಷ್ಯಾ ಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಭಾರತ ತಂಡಕ್ಕೆ ಲೀಗ್‌ ಹಂತದಲ್ಲೇ ಕಠಿಣ ಸವಾಲು ಎದುರಾಗಲಿದೆ.

ಭಾರತ ತಂಡವು ಆಸ್ಟ್ರೇಲಿಯಾ, ಸಿರಿಯಾ ಮತ್ತು ಉಜ್ಬೆಕಿಸ್ತಾನ ತಂಡಗಳ ಜತೆ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಟೂರ್ನಿಯ ‘ಡ್ರಾ’ ಎತ್ತುವ ಪ್ರಕ್ರಿಯೆ ದೋಹಾದಲ್ಲಿ ಗುರುವಾರ ನಡೆಯಿತು. ಏಷ್ಯಾ ಕಪ್‌ ಟೂರ್ನಿ ದೋಹಾದಲ್ಲಿ ಜನವರಿ 12 ರಿಂದ ನಡೆಯಲಿದೆ.

24 ತಂಡಗಳನ್ನು ಆರು ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಪ್ರತಿ ಗುಂಪಿನಲ್ಲಿ ಮೊದಲ ಎರಡು ಸ್ಥಾನಗಳನ್ನು ಪಡೆಯುವ ತಂಡಗಳು ನಾಕೌಟ್‌ಗೆ ಅರ್ಹತೆ ಪಡೆಯಲಿವೆ.

ಭಾರತ ತಂಡ ಇದೇ ಮೊದಲ ಬಾರಿ ಸತತ ಎರಡನೇ ಏಷ್ಯಾ ಕಪ್‌ನಲ್ಲಿ ಆಡಲಿದೆ. ಒಟ್ಟಾರೆಯಾಗಿ ಭಾರತಕ್ಕೆ ಇದು ಐದನೇ ಟೂರ್ನಿ ಆಗಿದೆ.

ಕಳೆದ ಬಾರಿಯ ಟೂರ್ನಿಯಲ್ಲಿ ಮೊದಲ ಪಂದ್ಯದಲ್ಲಿ ಥಾಯ್ಲೆಂಡ್‌ ತಂಡವನ್ನು ಮಣಿಸಿದ್ದ ಭಾರತ, ಬಳಿಕದ ಎರಡೂ ಪಂದ್ಯಗಳನ್ನು ಸೋತು ಲೀಗ್‌ ಹಂತದಲ್ಲೇ ಹೊರಬಿದ್ದಿತ್ತು.

ಗುಂಪುಗಳು: ‘ಎ’: ಕತಾರ್‌, ಚೀನಾ, ತಜಿಕಿಸ್ತಾನ, ಲೆಬನಾನ್‌

‘ಬಿ’: ಆಸ್ಟ್ರೇಲಿಯಾ, ಉಜ್ಬೆಕಿಸ್ತಾನ, ಸಿರಿಯಾ, ಭಾರತ

‘ಸಿ’: ಇರಾನ್‌, ಯುಎಇ, ಹಾಂಗ್‌ಕಾಂಗ್‌, ಪ್ಯಾಲೆಸ್ಟೀನ್

‘ಡಿ’: ಜಪಾನ್‌, ಇಂಡೊನೇಷ್ಯಾ, ಇರಾಕ್, ವಿಯೆಟ್ನಾಂ

‘ಇ’: ದಕ್ಷಿಣ ಕೊರಿಯಾ, ಮಲೇಷ್ಯಾ, ಜೋರ್ಡನ್, ಬಹರೇನ್

‘ಎಫ್‌’: ಸೌದಿ ಅರೇಬಿಯಾ, ಥಾಯ್ಲೆಂಡ್‌, ಕಿರ್ಗಿಸ್ತಾನ, ಒಮಾನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT