ಸಿಡ್ನಿ: ‘ಮಾಡು, ಇಲ್ಲವೇ ಮಡಿ’ ಪಂದ್ಯದಲ್ಲಿ ಮಂಗಳವಾರ 1–3ರಿಂದ ತೈವಾನ್ ವಿರುದ್ಧ ಪರಾಭವಗೊಂಡ ಭಾರತ ತಂಡವು ಎಎಫ್ಸಿ ಮಹಿಳಾ ಏಷ್ಯಾಕಪ್ ಫುಟ್ಬಾಲ್ ಟೂರ್ನಿಯಿಂದ ಗುಂಪು ಹಂತದಲ್ಲೇ ನಿರ್ಗಮಿಸಬೇಕಾಯಿತು.

ಭಾರತ ತಂಡವು ಪಂದ್ಯದ ಬಹುತೇಕ ಅವಧಿಯಲ್ಲಿ ಹಿಡಿತ ಸಾಧಿಸಿತ್ತು. ಹಲವು ಬಾರಿ ಗೋಲು ಗಳಿಸುವ ಅವಕಾಶಗಳನ್ನೂ ಸೃಷ್ಟಿಸಿತು. ಆದರೆ, ಸಿಕ್ಕ ಅವಕಾಶಗಳನ್ನು ಗೋಲನ್ನಾಗಿ ಪರಿವರ್ತಿಸುವ ಚಾಣಾಕ್ಷತೆಯ ಕೊರತೆಯು ತಂಡಕ್ಕೆ ಹೊಡೆತ ನೀಡಿತು.

ಈ ಪಂದ್ಯದಲ್ಲಿ ಕನಿಷ್ಠ 2 ಗೋಲುಗಳ ಅಂತರದಲ್ಲಿ ಭಾರತ ಗೆಲುವು ಸಾಧಿಸಿದ್ದರೆ, ಮುಂದಿನ ಸುತ್ತಿಗೆ ಪ್ರವೇಶ ಪಡೆಯುತ್ತಿತ್ತು.

ಮನಿಷಾ ಕಲ್ಯಾಣ್ (39ನೇ ನಿಮಿಷ) ಭಾರತ ತಂಡದ ಪರ ಏಕೈಕ ಗೋಲು ದಾಖಲಿಸಿದರು. ತೈವಾನ್ ತಂಡದ ವೈ.ಎಚ್.ಸು (12ನೇ ನಿ.), ವೈ.ವೈ.ಹ್ಸು (45+9ನೇ ನಿ.) ಹಾಗೂ ಯು–ಚಿನ್ ಚೆನ್ (77ನೇ ನಿ.) ತಲಾ ಒಂದು ಗೋಲು ಹೊಡೆದರು.

ಭಾರತ ತಂಡವು ಇದೇ ಮೊದಲ ಬಾರಿಗೆ ಈ ಪ್ರತಿಷ್ಠಿತ ಟೂರ್ನಿಯಲ್ಲಿ ಕಣಕ್ಕಿಳಿಯುವ ಅರ್ಹತೆ ಪಡೆದಿತ್ತು.

ನಾಯಕಿ ಸ್ವೀಟಿ ಗಂಭೀರ: ಪಂದ್ಯದ 83ನೇ ನಿಮಿಷದಲ್ಲಿ, ಎದುರಾಳಿ ತಂಡದ ಗೋಲು ಯತ್ನವನ್ನು ತಡೆಯಲು ಹೋದ ಭಾರತ ತಂಡದ ನಾಯಕಿ ಸ್ವೀಟಿ ದೇವಿ ಎನ್ಗಂಗ್ಬಾಮ್ ಹಾಗೂ ಗೋಲ್ಕೀಪರ್ ಪಂಥೊಯಿ ಚಾನು ಎನ್ಗ್ಯಾಂಗ್ಬಮ್ ಪರಸ್ಪರ ಡಿಕ್ಕಿಯಾಗಿ ಗಂಭೀರ ಗಾಯಗೊಂಡರು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಇನ್ನೊಂದು ಪಂದ್ಯದಲ್ಲಿ ಜಪಾನ್ ತಂಡವು 4–0ಯಿಂದ ವಿಯೆಟ್ನಾಂ ತಂಡವನ್ನು ಸೋಲಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.