ಬುಧವಾರ, ಅಕ್ಟೋಬರ್ 23, 2019
20 °C
ನೇಪಾಳ ವಿರುದ್ಧ 7–0 ಭರ್ಜರಿ ಗೆಲುವು– ಶ್ರೀದರ್ತ್‌ ಹ್ಯಾಟ್ರಿಕ್‌

ಸ್ಯಾಫ್‌ ಕಿರಿಯರ ಫುಟ್‌ಬಾಲ್‌: ಭಾರತಕ್ಕೆ ಪ್ರಶಸ್ತಿ

Published:
Updated:

ಕಲ್ಯಾಣಿ, ಪಶ್ಚಿಮ ಬಂಗಾಳ: ಭಾರತ ತಂಡ, ಸ್ಯಾಫ್‌ (ದಕ್ಷಿಣ ಏಷ್ಯ ಫುಟ್‌ಬಾಲ್‌ ಫೆಡರೇಷನ್‌) 15 ವರ್ಷದೊಳಗಿನವರ ಟೂರ್ನಿಯಲ್ಲಿ ಶನಿವಾರ ನೇಪಾಳ ತಂಡವನ್ನು ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತು. ಫಾರ್ವರ್ಡ್‌ ಆಟಗಾರ ಶ್ರೀದರ್ತ್‌ ನೊಂಗ್‌ಮೀಕಪಂ ಅವರ ಹ್ಯಾಟ್ರಿಕ್‌ ಸಾಧನೆ ಭಾರತದ 7–0 ಗೋಲುಗಳ ಗೆಲುವಿನಲ್ಲಿ ಎದ್ದುಕಂಡಿತು.

ಕಲ್ಯಾಣಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಶ್ರೀದರ್ತ್‌ (51, 76 ಮತ್ತು 80ನೇ ನಿಮಿಷ) ಮೂರು ಗೋಲುಗಳನ್ನು ಗಳಿಸಿದರೆ, ಮಹೆಸೊನ್‌ ಸಿಂಗ್ (15ನೇ), ಅಮನ್‌ದೀಪ್‌ (42ನೇ), ಸಿಬಜಿತ್‌ ಸಿಂಗ್‌ (45ನೇ) ಮತ್ತು ಹಿಮಾಂಶು ಜಂಗ್ರಾ (65ನೇ) ಉಳಿದ ಗೋಲುಗಳನ್ನು ಗಳಿಸಿದರು.

ಭಾರತ ಈ ಹಿಂದೆ 2013 ಮತ್ತು 2017ರಲ್ಲಿ ಚಾಂಪಿಯನ್‌ ಆಗಿತ್ತು. ಆ ಎರಡೂ ಸಂದರ್ಭಗಳಲ್ಲಿ ಟೂರ್ನಿ ನೇಪಾಳದಲ್ಲಿ ನಡೆದಿತ್ತು. ಬಿಬ್ಲಿಯಾನೊ ಫರ್ನಾಂಡಿಸ್‌ ತರಬೇತಿಯ ಭಾರತ ತಂಡ ಟೂರ್ನಿಯಲ್ಲಿ ಪಾರಮ್ಯ ಮೆರೆಯಿತು. ಐದು ಪಂದ್ಯಗಳಲ್ಲಿ 28 ಗೋಲುಗಳನ್ನು ಗಳಿಸಿತು ಮಾತ್ರವಲ್ಲ, ಎದುರಾಳಿಗಳಿಗೆ ಒಮ್ಮೆಯೂ ಗೋಲಿನ ಅವಕಾಶ ಬಿಟ್ಟುಕೊಡಲಿಲ್ಲ.

ಭಾರತ ಕಿರಿಯರ ತಂಡ ಇನ್ನು 16 ವರ್ಷದೊಳಗಿನವರ ಎಎಫ್‌ಸಿ ಟೂರ್ನಿಯಲ್ಲಿ ಆಡಲಿದೆ. ಈ ಟೂರ್ನಿ ಸೆಪ್ಟೆಂಬರ್‌ 18 ರಿಂದ 22ರವರೆಗೆ ಉಜ್ಬೇಕಿಸ್ತಾನದಲ್ಲಿ ನಡೆಯಲಿದೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)