ಜೆದ್ದಾ (ಪಿಟಿಐ): ಭಾರತ ಬಾಲಕರ ತಂಡವು ಎಎಫ್ಸಿ 17 ವರ್ಷದೊಳಗಿನವರ ಏಷ್ಯಾ ಕಪ್ ಫುಟ್ಬಾಲ್ ಟೂರ್ನಿಯ ಗುಂಪು ಹಂತದ ತನ್ನ ಎರಡನೇ ಪಂದ್ಯದಲ್ಲಿ ಭಾನುವಾರ 0–3ರಿಂದ ಉಜ್ಬೇಕಿಸ್ತಾನ ಎದುರು ಸೋತಿತು. ಅದರೊಂದಿಗೆ ಫಿಫಾ 17 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆಯುವ ಭಾರತದ ಕನಸು ಭಗ್ನಗೊಂಡಿತು.

ಡಿ ಗುಂಪಿನ ಈ ಪಂದ್ಯದಲ್ಲಿ ಉಜ್ಬೇಕಿಸ್ತಾನದ ಲಝೀಝ್ ಅಬ್ದುರೈಮೊವ್ (32ನೇ ನಿ.) ಹಾಗೂ ಅಖ್ರೊರ್ಬೆಕ್ ರವ್ಶನ್ಬೆಕೊವ್ (78ನೇ ನಿ.) ತಲಾ ಒಂದು ಗೋಲು ಹೊಡೆದರೆ, ಭಾರತದ ವಾಂಗಖೆಮ್ ಡೆನ್ನಿ ಸಿಂಗ್ (60ನೇ ನಿ.) ಎದುರಾಳಿ ತಂಡಕ್ಕೆ ಗೋಲಿನ ಉಡುಗೊರೆ ನೀಡಿದರು. ಭಾರತವು ಈ ಪಂದ್ಯದಲ್ಲಿ ಗೆಲುವು ಸಾಧಿಸಿದ್ದರೆ ಕ್ವಾರ್ಟರ್ಫೈನಲ್ ಪ್ರವೇಶಿಸುತ್ತಿತ್ತು. ಜೊತೆಗೆ, ಕತಾರ್ನಲ್ಲಿ ವರ್ಷಾಂತ್ಯದಲ್ಲಿ ನಡೆಯುವ ಫಿಫಾ 17 ವರ್ಷದೊಳಗಿನವರ ವಿಶ್ವಕಪ್ಗೂ ಅರ್ಹತೆ ಪಡೆಯುತ್ತಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-51-62501980

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.