ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಫುಟ್‌ಬಾಲ್‌: ಚಿಲಿಗೆ ಮಣಿದ ಭಾರತ

Last Updated 29 ನವೆಂಬರ್ 2021, 13:43 IST
ಅಕ್ಷರ ಗಾತ್ರ

ಮನೌಸ್‌, ಬ್ರೆಜಿಲ್‌: ತೀವ್ರ ಪೈಪೋಟಿಯ ನಡುವೆಯೂ ಭಾರತ ಮಹಿಳಾ ಫುಟ್‌ಬಾಲ್‌ ತಂಡವು ಚಿಲಿ ಎದುರು ನಿರಾಸೆ ಅನುಭವಿಸಿತು. ಇಲ್ಲಿ ನಡೆಯುತ್ತಿರುವ ನಾಲ್ಕು ರಾಷ್ಟ್ರಗಳ ಟೂರ್ನಿಯಲ್ಲಿ ಸೋಮವಾರ 0–3ರಿಂದ ಎದುರಾಳಿಗೆ ಮಣಿಯಿತು.

ಚಿಲಿ ತಂಡಕ್ಕೆ ಮರಿಯಾ ಉರುಟಿಯಾ (14ನೇ ನಿಮಿಷ) ಮೊದಲಾರ್ಧದಲ್ಲಿ ಗೋಲು ಗಳಿಸಿ ಮುನ್ನಡ ಗಳಿಸಿಕೊಟ್ಟರೆ, ಪಂದ್ಯದ ಕೊನೆಯ ಹಂತದಲ್ಲಿ ಸಬ್‌ಸ್ಟಿಟ್ಯೂಟ್‌ ಆಟಗಾರ್ತಿ ಇಸಿದೊರಾ ಹೆರ್ನಾಂಡೆಜ್ (84) ಮತ್ತು ಕರೆನ್‌ ಅರಾಯಾ (85ನೇ ನಿಮಿಷ) ಕಾಲ್ಚಳಕ ತೋರಿದರು.

ಭಾರತ ಈ ಪಂದ್ಯದಲ್ಲಿ ಮೂರು ಬದಲಾವಣೆ ಮಾಡಿತ್ತು. ಬ್ರೆಜಿಲ್ ಎದುರು ಆಡಿದ್ದ ಅದಿತಿ ಚೌಹಾನ್ ಬದಲಿಗೆ ಎಂ. ಲಿಂಟೊಯಿಂಗಂಬಿ ದೇವಿ ಅವರಿಗೆ ಅವಕಾಶ ನೀಡಿದ್ದರೆ, ಕಮಲಾದೇವಿ ಮತ್ತು ಡ್ಯಾಂಗ್ಮೆ ಗ್ರೇಸ್‌ ಸ್ಥಾನಕ್ಕೆ ಮಾರ್ಟಿನಾ ತೋಕ್‌ಚೊಮ್‌ ಮತ್ತು ಮನೀಷಾ ಪನ್ನಾ ಅವರನ್ನು ಕಣಕ್ಕಿಳಿಸಲಾಗಿತ್ತು.

ಆರನೇ ಹಾಗೂ 66ನೇ ನಿಮಿಷಗಳಲ್ಲಿ ಭಾರತಕ್ಕೆ ಗೋಲು ಗಳಿಕೆಯ ಉತ್ತಮ ಅವಕಾಶಗಳಿದ್ದವು. ಆದರೆ ಮನೀಷಾ ಕಲ್ಯಾಣ್‌ ಮಾಡಿದ ಪ್ರಯತ್ನವನ್ನು ಚಿಲಿ ಗೋಲ್‌ಕೀಪರ್‌ ಎಂಡ್ಲರ್‌ ವಿಫಲಗೊಳಿಸಿದರು.

ಭಾರತ ಮೂರನೇ ಹಾಗೂ ಕೊನೆಯ ಪಂದ್ಯದಲ್ಲಿ ಗುರುವಾರ ವೆನೆಜುಯೆಲಾ ಎದುರು ಆಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT