ಇಸ್ತಾಂಬುಲ್‌ ಕಪ್‌: ಭಾರತ–ಓಮನ್‌ ಸೆಣಸು

7

ಇಸ್ತಾಂಬುಲ್‌ ಕಪ್‌: ಭಾರತ–ಓಮನ್‌ ಸೆಣಸು

Published:
Updated:

ನವದೆಹಲಿ: ಹದಿನಾರು ವರ್ಷದೊಳಗಿನ ಭಾರತ ಫುಟ್‌ಬಾಲ್‌ ತಂಡವು ಟರ್ಕಿಯಲ್ಲಿ ನಡೆಯಲಿರುವ ಇಸ್ತಾಂಬುಲ್‌ ಕಪ್‌ ಟೂರ್ನಿಯ ಮೊದಲ ಪಂದ್ಯದಲ್ಲಿ ಓಮನ್‌ ಅನ್ನು ಎದುರಿಸಲಿದೆ. 

ಇದೇ ತಿಂಗಳ 20ರಂದು ಈ ಟೂರ್ನಿಯ ಮೊದಲ ಪಂದ್ಯ ನಡೆಯಲಿದೆ. 22ರಂದು ನಡೆಯುವ ಎರಡನೇ ಪಂದ್ಯದಲ್ಲಿ ಭಾರತ ತಂಡವು ಟರ್ಕಿ ತಂಡದೊಂದಿಗೆ ಸೆಣಸಲಿದೆ. 25ರಂದು ಟರ್ಕಿಯ ಬೆಸಿಕ್ತಾಸ್‌ ಕ್ಲಬ್‌ ಎದುರು ಅಭ್ಯಾಸ ಪಂದ್ಯವನ್ನು ಆಡಲಿದೆ. ಮುಂದಿನ ತಿಂಗಳು ನಡೆಯುವ ಎಎಫ್‌ಸಿ (ಏಷ್ಯಾ ಫುಟ್‌ಬಾಲ್‌ ಕಾನ್ಫೆಡರೇಷನ್‌) ಚಾಂಪಿಯನ್‌ಷಿಪ್‌ಗೆ ಪೂರ್ವಸಿದ್ಧತೆಗಾಗಿ ಭಾರತ ಈ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದೆ. 

ಇತ್ತೀಚೆಗೆ ನಡೆದ ಡಬ್ಲ್ಯುಎಎಫ್‌ಎಫ್‌ (ವೆಸ್ಟ್‌ ಏಷ್ಯನ್‌ ಫುಟ್‌ಬಾಲ್‌ ಫೆಡರೇಷನ್‌) ಚಾಂಪಿಯನ್‌ಷಿಪ್‌ನಲ್ಲಿ ಭಾರತ ತಂಡವು ರನ್ನರ್‌ ಅಪ್‌ ಆಗಿತ್ತು. ಭಾರತ ತಂಡವು ಈ ವರ್ಷದ ಆರಂಭದಿಂದ ಒಟ್ಟು 19 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !